alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರಾನ್ಸ್ ನಲ್ಲಿ ಜನಿಸಿದ ಮೊದಲ ಪಾಂಡಾಗೆ ನಾಮಕರಣ

ಫ್ರಾನ್ಸ್ ನಲ್ಲಿ ಜನಿಸಿರುವ ದೇಶದ ಮೊದಲ ಪಾಂಡಾ ನಾಮಕರಣ ಸಮಾರಂಭ ನಡೆಯಿತು. ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಅವರ ಪತ್ನಿ ಬ್ರಿಗಿಟ್ ಮೈಕ್ರೋನ್ ಪಾಂಡಾಗೆ ಹೆಸರಿಟ್ಟರು. ಮಧ್ಯ ಪ್ರಾನ್ಸ್ ನ ಮೃಗಾಲಯದಲ್ಲಿ ನಾಮಕರಣದ ಸಮಾರಂಭ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫ್ರಾನ್ಸ್ ಅಧ್ಯಕ್ಷರ ಪತ್ನಿ ಪಾಂಡಾಗೆ ಯುವಾನ್ ಮೆಂಗ್ ಎಂದು ಹೆಸರಿಟ್ಟಿದ್ದಾರೆ. ಚೀನಾದ ಅಧಿಕಾರಿಗಳೊಂದಿಗೆ ಬ್ರಿಗಿಟ್ ಮೈಕ್ರೋನ್ ಪಾಂಡಾಗೆ ನಾಮಕರಣ ಮಾಡಿದ್ರು. ಆಗಸ್ಟ್ ನಾಲ್ಕರಂದು ಜನಿಸಿದ್ದ ಪಾಂಡಾಗೆ ಈವರೆಗೆ ಮಿನಿ ಯವಾನ್ ಎಂದು ಕರೆಯಲಾಗ್ತಾಯಿತ್ತು. ಅದ್ರ ತಂದೆ ಹೆಸ್ರು ಯುವಾನ್. ತಾಯಿ ಹೆಸರು ಮಾದಾ ಸಾಥಿ ಯುವಾನ್.

ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಗಿಟ್, ಯುವಾನ್ ಯಂಗ್ ಫ್ರಾನ್ಸ್ ಹಾಗೂ ಚೀನಾದ ಸ್ನೇಹ ಸಂಕೇತವೆಂದಿದ್ದಾರೆ. ಯುವಾನ್ ಯಂಗ್ ಪಾಲಕರು ಎರಡು ದೇಶಗಳ ನಡುವಿನ ಸಂಬಂಧವನ್ನು ಗಟ್ಟಿ ಮಾಡಿದ್ದಾರೆ ಎಂದು ಬ್ರಿಗಿಟ್ ಹೇಳಿದ್ದಾರೆ. ಮೂರು ವರ್ಷಗಳಾದ ಮೇಲೆ ಯುವಾನ್ ಯಂಗ್ ಚೀನಾಕ್ಕೆ ವಾಪಸ್ ಹೋಗಲಿದೆ. ಜನವರಿ 13ರಿಂದ ಈ ಪಾಂಡಾವನ್ನು ಮೃಗಾಲಯದಲ್ಲಿ ಪ್ರವಾಸಿಗರು ನೋಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...