alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರ ಭೇಟಿಗೆ ಮುಂದಡಿ ಇಟ್ಟ ಪಾಕ್ ನೂತನ ಪ್ರಧಾನಿ ಇಮ್ರಾನ್

ಪಾಕಿಸ್ತಾನದ 22ನೇ ಪ್ರಧಾನ ಮಂತ್ರಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇನ್ನು ಮುಂದೆ ಅವರಿಗೆ ಪಾಕಿಸ್ತಾನ ವಿಶ್ವರಂಗದಲ್ಲಿ ಹೊಂದಿರುವ ಚಹರೆಯನ್ನು ಬದಲಿಸುವ ಮಹತ್ವಾಕಾಂಕ್ಷೆ ಇದೆಯಂತೆ. ಅದಕ್ಕಾಗಿಯೇ ಇಮ್ರಾನ್ ಖಾನ್ ಮೊದಲು ಭಾರತದ ಜೊತೆಗಿನ ಬಾಂಧವ್ಯ ವೃದ್ಧಿಗೆ ಮುಂದಾಗಿದ್ದಾರೆ. ಎಲ್ಲವೂ ಅಂದುಕೊಂಡ ಹಾಗೆ ಆದ್ರೆ ಮುಂದಿನ ತಿಂಗಳು ಮೋದಿ ಮತ್ತು ಇಮ್ರಾನ್ ಖಾನ್ ಭೇಟಿ ನಡೆಯಲಿದೆ.

ಇದಕ್ಕಾಗಿ ಇಮ್ರಾನ್ ಖಾನ್ ಸಾರ್ಕ್ ಸಮ್ಮೇಳನವನ್ನು ಪಾಕಿಸ್ತಾನದಲ್ಲಿ ನಡೆಸಲು ಮುಂದಾಗಿದ್ದಾರೆ. ದಕ್ಷಿಣ ಏಷ್ಯಾ ಸದಸ್ಯ ರಾಷ್ಟ್ರಗಳ ವೇದಿಕೆಯಲ್ಲಿ ಮೋದಿ ಅವರನ್ನು ಭೇಟಿಯಾಗುವ ಉದ್ದೇಶದೊಂದಿಗೆ ಪಾಕಿಸ್ತಾನ ಈಗ ಪ್ರಯತ್ನ ಆರಂಭಿಸಿದೆ.

ವಾಜಪೇಯಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸೋಕೆ ಪಾಕಿಸ್ತಾನದ ಕಾನೂನು ಮತ್ತು ದೂರ ಸಂಪರ್ಕ ಸಚಿವ ಸಯ್ಯದ್ ಅಲಿ ಜಾಫರ್ ಅಧ್ಯಕ್ಷತೆಯಲ್ಲಿ ನಿಯೋಗವೊಂದನ್ನು ಇಮ್ರಾನ್ ಖಾನ್ ಕಳಿಸಿದ್ದರು. ಈ ನಿಯೋಗ ಸುಷ್ಮಾ ಸ್ವರಾಜ್ ಅವರೊಂದಿಗೆ ಸಭೆಯನ್ನು ಕೂಡ ನಡೆಸಿದೆ.

ಆನಂತರ ಪಾಕಿಸ್ತಾನಕ್ಕೆ ವಾಪಸ್ಸಾದ ಸಯ್ಯದ್ ಅಲಿ ಜಾಫರ್ ಅಲ್ಲಿನ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಚಾರ ಸೇರಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳು ಶಾಂತಿಯುತವಾಗಿ ಬಗೆಹರಿಯುವ ನಂಬಿಕೆ ಇದೆ ಅಂತ ಹೇಳಿದ್ದಾರೆ. ಈ ವೇಳೆ ಜಫರ್ ವಾಜಪೇಯಿಯವರು ಬರೆದಿರುವ ಕವನವನ್ನು ವಾಚನ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...