alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದಲ್ಲಿ ಮೊದಲ ಬಾರಿ ಗಲ್ಲಿಗೇರಲಿದ್ದಾನೆ ಒಬ್ಬ ಭಾರತೀಯ….

ಅಮೆರಿಕಾದಲ್ಲಿ ಮೊದಲ ಬಾರಿ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತಿದೆ. ಮೂಲತಃ ಆಂಧ್ರಪ್ರದೇಶ ನಿವಾಸಿಯಾಗಿರುವ 32 ವರ್ಷದ ರಘುನಂದನ್ ಅಮೆರಿಕಾದ ವೃದ್ಧ ಮಹಿಳೆ ಹಾಗೂ ಆಕೆ ಮೊಮ್ಮಗಳನ್ನು ಅಪಹರಿಸಿ ಇಬ್ಬರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.

ಮುಂದಿನ ತಿಂಗಳ 23ರಂದು ರಘುನಂದನ್ ನನ್ನು ಗಲ್ಲಿಗೆ ಏರಿಸಲಾಗುವುದು. 61 ವರ್ಷದ ಮಹಿಳೆ ಹಾಗೂ ಆಕೆಯ 10 ತಿಂಗಳ ಮೊಮ್ಮಗಳನ್ನು ಅಪಹರಿಸಿ ರಘುನಂದನ್ ಕೊಲೆ ಮಾಡಿದ್ದ. 2014ರಲ್ಲಿ ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್ ಮರಣದಂಡನೆ ವಿಧಿಸಿತ್ತು.

ಈ ಶಿಕ್ಷೆಯನ್ನು ರದ್ದು ಮಾಡುವ ಸಾಧ್ಯತೆಯೂ ಇದೆ. ಪೆನ್ಸಿಲ್ವೇನಿಯಾ ಗವರ್ನರ್ ಟಾಮ್ ವುಲ್ಫ್ 2015ರಲ್ಲಿ ಮರಣದಂಡನೆ ಶಿಕ್ಷೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಫೆಬ್ರವರಿ 23ರಂದು ನೇಣಿಗೇರಿಸುವ ದಿನಾಂಕ ನಿಗದಿಯಾಗಿದೆ. ಆದ್ರೆ ಗವರ್ನರ್ ಮರಣದಂಡನೆ ಮೇಲೆ ನಿಷೇಧ  ಹೇರಿದ್ದರಿಂದ ರಘುನಂದನ್ ಗೆ ಜೀವದಾನ ಸಿಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...