alex Certify
ಕನ್ನಡ ದುನಿಯಾ       Mobile App
       

Kannada Duniya

ದಶಕಗಳ ಬಳಿಕ ಪಾಕ್ ಸಂಪುಟದಲ್ಲಿ ಹಿಂದೂ ಸಚಿವ

pak-mini-hindu

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್ ಶರೀಫ್ ಕೆಳಗಿಳಿದ ನಂತರ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಪಾಕಿಸ್ತಾನ ಪ್ರಧಾನಿಯಾಗಿ ಶಾಹಿದ್ ಖಖಾನ್ ಅಬ್ಬಾಸಿ ಅಧಿಕಾರ ವಹಿಸಿಕೊಂಡಿದ್ದು, ಅವರ ಸಂಪುಟದಲ್ಲಿ 47 ಸಚಿವರಿದ್ದಾರೆ.

ಅಧ್ಯಕ್ಷರ ಭವನದಲ್ಲಿ ನಡೆದ ಸಮಾರಂಭದಲ್ಲಿ 28 ಫೆಡರಲ್ ಸಚಿವರು, 19 ಸಹಾಯಕ ಸಚಿವರಿಗೆ ಅಧ್ಯಕ್ಷ ಮಮ್ನೂನ್ ಹುಸೇನ್ ಪ್ರಮಾಣ ವಚನ ಬೋಧಿಸಿದ್ದಾರೆ.

ನೂತನ ಸಂಪುಟದಲ್ಲಿ 2 ದಶಕದ ಬಳಿಕ ಹಿಂದೂ ಸಚಿವರೊಬ್ಬರು ಕಾಣಿಸಿಕೊಂಡಿದ್ದಾರೆ. 65 ವರ್ಷದ ದರ್ಶನ್ ಲಾಲ್, ಸಿಂಧ್ ಪ್ರಾಂತ್ಯದ ಘೋಟ್ಕಿ ಮೀರ್ ಪುರ್ ಮ್ಯಾಥೆಲೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಅವರು ಸಂಪುಟಕ್ಕೆ ಸೇರಿದ್ದಾರೆ.

ಹಿಂದಿನ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಖ್ವಾಜಾ ಮೊಹಮ್ಮದ್ ಆಸೀಫ್ ಅವರಿಗೆ ವಿದೇಶಾಂಗ ಖಾತೆ ಜವಾಬ್ದಾರಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...