alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪಾರ್ಕ್ ಗೆ ಬಟ್ಟೆ ಧರಿಸಿ ಬರುವಂತಿಲ್ಲ….

ಪ್ಯಾರಿಸ್ ನಲ್ಲಿ ವಿಶಿಷ್ಟ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ. ಆದ್ರೆ ನೀವು ಇಲ್ಲಿಗೆ ಬಟ್ಟೆಯಿಲ್ಲದೇ ಬರಬೇಕು. ಯಾಕಂದ್ರೆ ಇದೊಂದು ನಗ್ನ ಪಾರ್ಕ್. ಇಲ್ಲಿಗೆ ಬರುವವರೆಲ್ಲ ವಿವಸ್ತ್ರರಾಗಿಯೇ ಇರ್ತಾರೆ.

ಪ್ಯಾರಿಸ್ ನಲ್ಲಿ ನಗ್ನವಾಗಿರಲು ಬಯಸುವವರಿಗಾಗಿ ಪ್ರತ್ಯೇಕ ಉದ್ಯಾನವನ ಬೇಕು ಅನ್ನೋ ಬೇಡಿಕೆ ಮೊದಲಿನಿಂದ್ಲೂ ಇತ್ತು. ಯಾಕಂದ್ರೆ ಇಲ್ಲಿ ಸುಮಾರು 2.5 ಮಿಲಿಯನ್ ಜನರು ನಗ್ನತೆಯನ್ನು ಅನುಸರಿಸುತ್ತಾರೆ.

 

ಫ್ರಾನ್ಸ್ ರಾಜಧಾನಿಯಲ್ಲೊಂದು ಸ್ವಿಮ್ಮಿಂಗ್ ಪೂಲ್ ಇದೆ. ಅಲ್ಲಿ ವಾರಕ್ಕೆ ಮೂರು ಬಾರಿ ನಗ್ನವಾಗಿ ಈಜಾಡಲು ಅವಕಾಶ ಕಲ್ಪಿಸಲಾಗಿದೆ. ತೆರೆದ ಮನಸ್ಸಿನವರಿಗಾಗಿಯೇ ಈ ನ್ಯೂಡ್ ಪಾರ್ಕ್ ಎನ್ನುತ್ತಾರೆ ಅಧಿಕಾರಿಗಳು.

ಬೆಳಗ್ಗೆ 8 ಗಂಟೆಯಿಂದ ಸಂಜೆ 7.30ರವರೆಗೂ ಈ ಪಾರ್ಕ್ ನಲ್ಲಿ ವಿವಸ್ತ್ರರಾಗಿ ಓಡಾಡಿಕೊಂಡಿರಬಹುದು. ಈ ನಗ್ನ ಉದ್ಯಾನವನ ಕೆಲವೇ ದಿನಗಳಲ್ಲಿ ಭಾರೀ ಜನಪ್ರಿಯವಾಗಿದೆ. ಜನರು ತಂಡೋಪತಂಡವಾಗಿ ಈ ಪಾರ್ಕ್ ಗೆ ಬರ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...