alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಅಗ್ನಿಶಾಮಕ ಸಿಬ್ಬಂದಿಯ ಸಾಹಸ

firefighter-walks-on-15th-floor-ledge_650x400_81494331379

ನೆಲದಿಂದ 150 ಅಡಿ ಎತ್ತರದಲ್ಲಿ ಪವಾಡ ಸದೃಶ ರೀತಿಯ ರಕ್ಷಣಾ ಕಾರ್ಯ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮಹಿಳೆಯೊಬ್ಬಳನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾನೆ. ಚೀನಾದಲ್ಲಿ ನಡೆದ ಘಟನೆ ಇದು. ಪತಿಯ ಜೊತೆಗೆ ಜಗಳವಾಡಿಕೊಂಡಿದ್ದ ಮಹಿಳೆ ಅಪಾರ್ಟ್ ಮೆಂಟ್ ನ 15ನೇ ಮಹಡಿಯಿಂದ ಕೆಳಕ್ಕೆ ಹಾರಲು ಸಜ್ಜಾಗಿದ್ಲು.

ಚಾವಣಿಯ ಅಂಚಿನಲ್ಲಿದ್ದ ಕಟ್ಟೆಯ ಮೇಲೆ ಕುಳಿತಿದ್ಲು. ಅವಳನ್ನ ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಸಾಹಸ ಮಾಡಿದ್ದಾನೆ. ತೆಳುವಾಗಿದ್ದ ಬೀಮ್ ಮೇಲೆ ಧೈರ್ಯದಿಂದ ನಡೆದು ಬಂದು ಅವಳನ್ನು ಎಳೆದೊಯ್ದಿದ್ದಾನೆ. ತಾನು ರಕ್ಷಣೆಗೆ ಬರುತ್ತಿರುವ ವಿಷಯ ಮಹಿಳೆಗೆ ಗೊತ್ತಾಗದಂತೆ ಅಗ್ನಿಶಾಮಕ ಸಿಬ್ಬಂದಿ ನಿಧಾನವಾಗಿ ಈ ಕೆಲಸ ಮಾಡಿದ್ದಾನೆ.

ಆಕೆ ತಿರುಗಿ ನೋಡುವಷ್ಟರಲ್ಲಿ ಅವಳನ್ನು ಪಕ್ಕಕ್ಕೆ ಎಳೆದುಹಾಕಿದ್ದಾನೆ. ನಂತರ ಐವರು ಅಗ್ನಿಶಾಮಕ ಸಿಬ್ಬಂದಿ ಅವಳನ್ನು ಕೆಳಕ್ಕೆ ಕರೆದುಕೊಂಡು ಬಂದ್ರು. ಮಹಿಳೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಪ್ರಾಣಕ್ಕೇ ಅಪಾಯವಿತ್ತು. ಕಾಲುಗಳು ಕೊಂಚ ತಡಬಡಾಯಿಸಿದ್ರೂ 150 ಅಡಿ ಮೇಲಿಂದ ಕೆಳಕ್ಕೆ ಬೀಳುವ ಸಾಧ್ಯತೆ ಇತ್ತು. ಆದ್ರೆ ಆತ ಪ್ರಾಣದ ಹಂಗು ತೊರೆದು ಮಹಿಳೆಯನ್ನು ರಕ್ಷಿಸಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...