alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದವಳಿಗೆ ಜಾಡಿಸಿ ಒದ್ದ ಫೈರ್ ಫೈಟರ್

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ 8 ನೇ ಅಂತಸ್ತಿನ ತನ್ನ ಮನೆಯ ಕಿಟಕಿ ಮೇಲೆ ಕುಳಿತಿದ್ದ ಮಹಿಳೆಯೊಬ್ಬಳಿಗೆ ವಾಪಾಸ್ ಮನೆಯೊಳಗೆ ಬೀಳುವಂತೆ ಜಾಡಿಸಿ ಒದೆಯುವ ಮೂಲಕ ಅಗ್ನಿ ಶಾಮಕ ಸಿಬ್ಬಂದಿ ಆಕೆಯ ಪ್ರಾಣವನ್ನು ರಕ್ಷಿಸಿದ್ದಾನೆ.

ಮಾರ್ಚ್ 11 ರಂದು ಚೀನಾದ ನನ್ಜಿಂಗ್ ನಗರದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಮನೆಯ ಕಿಟಕಿ ಮೇಲೆ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಳು.
ಸ್ಥಳೀಯರು ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಆಕೆಯ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕೆಲ ಸಿಬ್ಬಂದಿ ಕೆಳಗೆ ನಿಂತಿದ್ದರೆ ಓರ್ವ ಸಿಬ್ಬಂದಿ ತನ್ನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮೇಲಿನಿಂದ ಆಕೆಯಿದ್ದ ಫ್ಲೋರ್ ಬಳಿ ಬಂದಿದ್ದಾನೆ. ಕಿಟಕಿ ಮೇಲೆ ಕುಳಿತಿದ್ದ ಮಹಿಳೆಗೆ ಒಳ ಹೋಗಿ ಬೀಳುವಂತೆ ಆತ ಜಾಡಿಸಿ ಒದ್ದಿದ್ದಾನೆ. ಮಹಿಳೆ ಆತ್ಮಹತ್ಯೆ ಯತ್ನದಿಂದ ಬಚಾವಾಗಿದ್ದರೂ ಸಿಬ್ಬಂದಿ ಕೊಟ್ಟ ಒದೆತಕ್ಕೆ ಗಾಯಗೊಂಡಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...