alex Certify
ಕನ್ನಡ ದುನಿಯಾ       Mobile App
       

Kannada Duniya

2ನೇ ಮಹಡಿಯಿಂದ ಎಸೆದ ಮಗು ಸೇಫಾಗಿದ್ಹೇಗೆ ಗೊತ್ತಾ?

firefighter-catches-baby_650x400_41492781265

ಇಂಟರ್ನೆಟ್ ನಲ್ಲಿ ವೈರಲ್ ಆಗಿರೋ ವಿಡಿಯೋ ಒಂದು ಅರೆಕ್ಷಣ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ಬೆಂಕಿ ತಗುಲಿದ್ದ ಕಟ್ಟಡದ ಮೇಲಿಂದ ಪುಟ್ಟ ಮಗುವೊಂದನ್ನು ಕೆಳಕ್ಕೆಸೆಯಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಅದನ್ನು ಹಿಡಿದಿರುವ ದೃಶ್ಯ ಇದು. ಪ್ರತ್ಯಕ್ಷದರ್ಶಿಯೊಬ್ಬ ಅದನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ.

ಜಾರ್ಜಿಯಾದ ಡೆಕಾಬ್ ಕೌಂಟಿ ಎಂಬಲ್ಲಿ ಅಪಾರ್ಟ್ ಮೆಂಟ್ ಒಂದಕ್ಕೆ ಬೆಂಕಿ ತಗುಲಿತ್ತು. ಚಿಕ್ಕ ಮಗು ಹಾಗೂ ಅದರ ತಂದೆ ಕಟ್ಟಡದೊಳಕ್ಕೆ ಸಿಲುಕಿಕೊಂಡಿದ್ರು. ಮಗುವನ್ನು ಬೆಂಕಿಯಿಂದ ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬಂದಿದ್ರು. ಆದ್ರೆ ಎರಡನೇ ಮಹಡಿವರೆಗೆ ಹೋಗಿ ಮಗುವನ್ನು ಕರೆದುಕೊಂಡು ಬರುವಷ್ಟು ಸಮಯವಿರಲಿಲ್ಲ.

ಕ್ಷಣಕ್ಷಣಕ್ಕೂ ಬೆಂಕಿಯ ಜ್ವಾಲೆ ಕಟ್ಟಡವನ್ನು ಆವರಿಸಿಕೊಳ್ಳುತ್ತಿತ್ತು. ಹಾಗಾಗಿ ಮಗುವನ್ನು ಕೆಳಕ್ಕೆ ಎಸೆಯುವಂತೆ ತಂದೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸೂಚಿಸಿದ್ದಾರೆ. ಕೆಳಗೆ ನಿಂತಿದ್ದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ಕ್ಯಾಚ್ ಹಿಡಿದಿದ್ದಾನೆ. ನಂತರ ತಂದೆಯನ್ನು ಕೂಡ ಸೇಫಾಗಿ ಕರೆತರಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...