alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಮೇಲೆ ಬೆಂಕಿ ಬಿದ್ದರೂ ಅಲ್ಲಾಡಲಿಲ್ಲ ಭೂಪ !

human-combustion

ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೋದರು ಎಂಬುದು ಗಾದೆ ಮಾತು. ಬೆಂಕಿ ಕೆನ್ನಾಲಿಗೆ ವ್ಯಾಪಿಸಿದಂತೆ ಕಷ್ಟ, ಸಮಸ್ಯೆ ಎದುರಾದ ನಂತರ ವಿಳಂಬ ಮಾಡಿ ಪರಿಹಾರ ಮಾರ್ಗಗಳನ್ನು ಹುಡುಕುವುದನ್ನು ಅರ್ಥೈಸಲು ಹೀಗೆ ಹೇಳುತ್ತಾರೆ. ಗಡ್ಡದ ಬೆಂಕಿ ಆಗಿರಲಿ ಮೈಗೆ ಬೆಂಕಿ ತಗುಲಿದರೂ ಅಲ್ಲಾಡದ ಭೂಪನನ್ನು ನೋಡಿ.

ಸಿಕ್ಕಾಪಟ್ಟೆ ಮದ್ಯ ಸೇವಿಸಿದವರು ನಡೆಯಲು ಆಗದೇ ಎಲ್ಲೆಂದರಲ್ಲಿ ಬೀಳುವುದನ್ನು ನೋಡಿದ್ದೇವೆ. ಅಂತಹವರಿಗೆ ಬೆಂಕಿ ತಾಗಿದರೆ ಬಿಸಿಯಿಂದ ತಕ್ಷಣವೇ ಎಚ್ಚೆತ್ತು ಬಿಡುತ್ತಾರೆ. ಆದರೆ, ಸರ್ಬಿಯಾದಲ್ಲಿ ಭೂಪನೊಬ್ಬ ಕುಡಿದು ಫುಲ್ ಟೈಟಾಗಿ ಮಲಗಿದ್ದು, ಅದೇನಾಯ್ತೋ ಏನೋ ಅವನಿಗೆ ಬೇಂಕಿ ತಗುಲಿದೆ. ಮೈಮೇಲಿನ ಬಟ್ಟೆ ಹೊತ್ತಿಕೊಂಡು ಉರಿಯುತ್ತಿದ್ದರೂ ಈ ಪುಣ್ಯಾತ್ಮನಿಗೆ ಸ್ವಲ್ಪವೂ ಎಚ್ಚರವಾಗಿಲ್ಲ. ತನ್ನ ಪಾಡಿಗೆ ತಾನು ಮಲಗಿದ್ದಾನೆ. ಇದನ್ನು ಯುವಕನೊಬ್ಬ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. ಮೈಮೇಲೆ ಬೆಂಕಿಬಿದ್ದು, ಉರಿಯುತ್ತಿದ್ದರೂ ಅಲುಗಾಡದೇ ಮಲಗಿದ್ದ ಈ ವ್ಯಕ್ತಿ ಅದೆಷ್ಟು ಕುಡಿದಿರಬಹುದೆಂಬುದನ್ನು ನೀವೇ ಊಹಿಸಿ. ಕೊನೆಗೆ ಬೆಂಕಿಯನ್ನು ನಂದಿಸಿ ವ್ಯಕ್ತಿಯನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...