alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಮತ್ತೆ ಅಗ್ನಿ ಅನಾಹುತ

fire-londoon

ಲಂಡನ್: ಲಂಡನ್ ನ ಕೆನಿಂಗ್ ಟನ್ ಲ್ಯಾಟಿಮರ್ ರಸ್ತೆಯ ಗ್ರೆನ್ ಫೆಲ್ ಅಪಾರ್ಟ್ಮೆಂಟ್ ಗೆ ಬೆಂಕಿ ತಗುಲಿ, ಹಲವರು ಸಾವು ಕಂಡ ಘಟನೆ ಮಾಸುವ ಮೊದಲೇ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ.

ಉತ್ತರ ಲಂಡನ್ ನಲ್ಲಿರುವ ಕ್ಯಾಮ್ಡೆಲ್ ಮಾರ್ಕೇಟ್ ಕಟ್ಟಡಕ್ಕೆ ಬೆಂಕಿ ತಗುಲಿದ್ದು, 1, 2 ಹಾಗೂ 3 ನೇ ಮಹಡಿ ಸುಟ್ಟು ಹೋಗಿದೆ.

10 ಅಗ್ನಿಶಾಮಕ ದಳದ 70 ಕ್ಕೂ ಅಧಿಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಭಾನುವಾರ ಮಧ್ಯರಾತ್ರಿ ಕಾಣಿಸಿಕೊಂಡ ಬೆಂಕಿ ನಿಯಂತ್ರಣಕ್ಕೆ ಸಿಗದೇ ಹೊತ್ತಿ ಉರಿದಿದ್ದು, ಕಟ್ಟಡದಲ್ಲಿದ್ದ ಹಲವರು ಮೇಲಿಂದ ಜಿಗಿದು ಪಾರಾಗಿದ್ದಾರೆ.

ಕಟ್ಟಡದಲ್ಲಿ ಸಿಲುಕಿದ್ದ ಹಲವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಯಾವುದೇ ಸಾವು, ನೋವಿನ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...