alex Certify
ಕನ್ನಡ ದುನಿಯಾ       Mobile App
       

Kannada Duniya

ಜಪಾನ್ ನಲ್ಲಿ 1 ಕರ್ಬೂಜದ ಬೆಲೆ ಕೇಳಿದ್ರೆ ದಂಗಾಗ್ತೀರಾ

ಭಾರತದಲ್ಲಿ ಕರ್ಬೂಜ ಹಾಗೂ ಕಲ್ಲಂಗಡಿ ಹಣ್ಣಿನ ಸೀಜನ್ ಇದು. ಕರ್ಬೂಜ ಹಾಗೂ ಕಲ್ಲಂಗಡಿ ಹಣ್ಣು ಪ್ರತಿ ಕಿಲೋಗ್ರಾಮ್ ಗೆ 40-80 ರೂಪಾಯಿಗೆ ಮಾರಾಟವಾಗುತ್ತಿದೆ. ಆದ್ರೆ ಜಪಾನ್ ನಲ್ಲಿ ಒಂದು ಕರ್ಬೂಜದ ಬೆಲೆ 6 ರಿಂದ 10 ಸಾವಿರ ರೂಪಾಯಿ. ಜಪಾನ್ ನಲ್ಲಿ ಕರ್ಬೂಜವನ್ನು ಐಷಾರಾಮಿ ಹಣ್ಣು ಎಂದು ಪರಿಗಣಿಸಲಾಗಿದೆ.

ಸಾಮಾನ್ಯವಾಗಿ ಜಪಾನ್ ನಲ್ಲಿ ಎಲ್ಲ ಹಣ್ಣಿನ ಬೆಲೆ ದುಬಾರಿ. ಭಾರತದಲ್ಲಿ ಸಂಬಂಧಿಕರು ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆ ನೀಡಲಿ ಎಂದು ಬಯಸಿದ್ರೆ ಜಪಾನಿನಲ್ಲಿ ಮಾತ್ರ ಹಣ್ಣನ್ನು ಉಡುಗೊರೆಯಾಗಿ ನೀಡ್ಲಿ ಎಂಬುದು ಸಂಬಂಧಿಕರ ಬಯಕೆ.

ಜಪಾನ್ ರೈತರು ಹಣ್ಣಿನ ಗಾತ್ರಕ್ಕೆ ಹೆಚ್ಚಿನ ಮಹತ್ವ ನೀಡ್ತಾರೆ. ಹಣ್ಣು ನಿರ್ಧಾರಿತ ಆಕಾರ ಹಾಗೂ ಗಾತ್ರವನ್ನು ಹೊಂದಿರಬೇಕು. ಇಲ್ಲವಾದ್ರೆ ಅದನ್ನು ರೈತರು ಮಾರುಕಟ್ಟೆಗೆ ತರುವುದೇ ಇಲ್ಲ. ಕರ್ಬೂಜ ಒಂದೇ ರೀತಿಯಲ್ಲಿರಲು ಸಾಧ್ಯವಿಲ್ಲ. ಆಕಾರ, ತೂಕದಲ್ಲಿ ಬದಲಾವಣೆಯಾದ ಕರ್ಬೂಜ ವ್ಯರ್ಥವಾಗುತ್ತದೆ. ಕೆಲವೊಮ್ಮೆ ಹಣ್ಣುಗಳ ಹರಾಜು ನಡೆಯುತ್ತದೆ. ಹರಾಜಿನ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ. ಯಾಕೆಂದ್ರೆ ಹರಾಜು ಲಕ್ಷಾಂತರ ರೂಪಾಯಿ ಮೌಲ್ಯದಲ್ಲಿ ನಡೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...