alex Certify
ಕನ್ನಡ ದುನಿಯಾ       Mobile App
       

Kannada Duniya

ವಿಸ್ಮಯ…! ಫಿಫಾ ನಾಡಿನಲ್ಲಿ ‘ಹೃದಯ’ ಹಾಡಿದ ಕಥೆ

ಡಾ. ಬಾಲಕೃಷ್ಣನ್ ಅವರಿಗೆ ಮೊನ್ನೆ ಮೊನ್ನೆವರೆಗೂ ಫಿಫಾ ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಗಳನ್ನ ನೋಡೋದಕ್ಕೆ ರಷ್ಯಾಗೆ ಹೋಗಬೇಕು ಅನ್ನೋ ಪ್ಲಾನ್ ಇರಲಿಲ್ಲ. ಆದ್ರೆ ಬಾಲಕೃಷ್ಣನ್ ಅವರಿಗೆ ಕರೆ ಮಾಡಿದ ರಷ್ಯಾದ ರೋಮನ್ ಎಂಬ ಏಳು ವರ್ಷದ ಬಾಲಕನೊಬ್ಬ ನಿಮಗಾಗಿ ಫುಟ್ ಬಾಲ್ ಪಂದ್ಯಾವಳಿಯ ಎರಡು ಟಿಕೆಟ್ ಗಳನ್ನ ತೆಗೆದುಕೊಂಡಿದ್ದೇನೆ. ನಾವಿಬ್ಬರು ಒಟ್ಟಿಗೆ ಫುಟ್ಬಾಲ್ ವೀಕ್ಷಣೆ ಮಾಡೋಣ ಅಂತ ಕೇಳಿಕೊಂಡ. ತಡ ಮಾಡದ ವೈದ್ಯರು ಕೂಡಲೇ ರಷ್ಯಾಗೆ ತೆರಳಿದ್ದಾರೆ.

ಈ ಫುಟ್ ಬಾಲ್ ನೆಪದ ಹಿಂದೆ ಆ ಬಾಲಕನಿಗೆ ಪ್ರಾಣ ಉಳಿಸಿದ ವೈದ್ಯರಿಗೊಂದು ಥ್ಯಾಂಕ್ಸ್ ಹೇಳೋ ಕಾರಣವಿತ್ತು. ಅಸಲಿಗೆ ಇದೆಲ್ಲದರ ಹಿಂದಿರೋದು ಮನ ಮಿಡಿಯುವ ಕಥೆ. ಡಾ. ಬಾಲಕೃಷ್ಣನ್ ರೋಮನ್ ಎಂಬ ಬಾಲಕನನ್ನ ಭೇಟಿಯಾಗಿದ್ದು, 2017ರ ನವೆಂಬರ್ ನಲ್ಲಿ. ಆಗ ರೋಮನ್ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಅವನು ಭಾರತಕ್ಕೆ ಬಂದಿದ್ದ. ಅವನಿಗೆ ಉಸಿರಾಟದ ಸಮಸ್ಯೆ ಇತ್ತು. ಬಾಲಕನ ಹೃದಯ, ರಕ್ತವನ್ನು ಸರಿಯಾಗಿ ಪಂಪ್ ಮಾಡುತ್ತಿರಲಿಲ್ಲ. ಈ ಸಂಬಂಧ ಬಾಲಕನಿಗೆ ಹೃದಯ ಬದಲಿಸೋಕೆ ವೈದ್ಯರ ನಿರ್ಧರಿಸಿದ್ದರು.

ಜನವರಿ 4ರಂದು ರೋಮನ್ ಕಾರ್ಡಿಯಾಕ್ ಅರೆಸ್ಟ್ ಗೆ ಒಳಗಾದ . 45 ನಿಮಿಷಗಳ ಕಾಲ ಅವನನ್ನ ಉಳಿಸೋಕೆ ವೈದ್ಯರು ಹರಸಾಹಸ ಪಡಬೇಕಾಯ್ತು. ಈ ಹಂತದಲ್ಲಿ ರೋಮನ್ ಪ್ರಾಣ ಉಳಿಸೋಕೆ ವೈದ್ಯರು ಹೃದಯ ಕಸಿ ಚಿಕಿತ್ಸೆ ಮಾಡೋದಕ್ಕೆ ನಿರ್ಧರಿಸಿದರು. ಚೆನ್ನೈನಲ್ಲಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ವ್ಯಕ್ತಿಯ ಹೃದಯವನ್ನು ರೋಮನ್ಗೆ ಜೋಡಿಸುವ ಸವಾಲಿನ ನಿರ್ಧಾರವನ್ನ ಮಾಡಿದ್ರು.

ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಆ ವ್ಯಕ್ತಿಯ ಹೃದಯ ಶೇಕಡಾ 35ರಷ್ಟು ಮಾತ್ರ ಕೆಲಸ ಮಾಡ್ತಿತ್ತು. ಹಾಗಿದ್ದರು ಯಶಸ್ವಿ ಹೃದಯ ಕಸಿ ಚಿಕಿತ್ಸೆಯನ್ನ ವೈದ್ಯರು ಮಾಡಿ ಮುಗಿಸಿದ್ರು. ಆನಂತರದಲ್ಲಿ ರಷ್ಯಾಗೆ ತೆರಳಿದ ಬಾಲಕ ನಿಧಾನವಾಗಿ ಚೇತರಿಸಿಕೊಂಡ. ಫಿಫಾ ಸಮಯದಲ್ಲಿ ವೈದ್ಯರನ್ನ ರಷ್ಯಾಗೆ ಕರೆಸಿಕೊಂಡು ಜೀವ ಉಳಿಸಿದ್ದಕ್ಕೆ ಕೃತಜ್ಞತೆ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...