alex Certify
ಕನ್ನಡ ದುನಿಯಾ       Mobile App
       

Kannada Duniya

”ವಿದೇಶಿ ಪುರುಷರ ಜೊತೆ ಸಂಬಂಧ ಬೆಳೆಸಬೇಡಿ”

ಫಿಫಾ ವಿಶ್ವಕಪ್ ಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ರಷ್ಯಾದಲ್ಲಿ ಫಿಫಾ ವಿಶ್ವಕಪ್ ನಡೆಯಲಿದೆ. ಈ ಮಧ್ಯೆ ರಷ್ಯಾ ಸಂಸದೆಯೊಬ್ಬರ ವಿಚಿತ್ರ ಹೇಳಿಕೆಯೊಂದು ಸುದ್ದಿ ಮಾಡಿದೆ. ಮಹಿಳಾ ಸಂಸದೆ ರಷ್ಯಾ ಮಹಿಳೆಯರಿಗೆ ಕಿವಿ ಮಾತೊಂದನ್ನು ಹೇಳಿದ್ದಾರೆ. ಬಿಳಿಯರಲ್ಲದವರ ಜೊತೆ ಶಾರೀರಿಕ ಸಂಬಂಧ ಬೆಳೆಸಬೇಡಿ ಎಂದು ಸಂಸದೆ ಹೇಳಿದ್ದಾರೆ.

1980ರ ಮಾಸ್ಕೋ ಗೇಮ್ಸ್ ಹಾಗೂ ಒಲಂಪಿಕ್ಸ್ ಚಿಲ್ಡ್ರನ್ಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರವಾಗಿ ಸಂಸದೆ ಈ ಸಲಹೆ ನೀಡಿದ್ದಾರೆ. ವಾಸ್ತವವಾಗಿ 1980 ರ ಸಮಯದಲ್ಲಿ ರಷ್ಯಾದಲ್ಲಿ ಗರ್ಭ ನಿರೋಧಕದ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ. ರಷ್ಯಾ ಮಹಿಳೆಯರು ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಪುರುಷರ ಜೊತೆ ಸಂಬಂಧ ಬೆಳೆಸಿದ್ದರು. ಆಗ ಜನಿಸಿದ ಮಗುವಿಗೆ ಒಲಂಪಿಕ್ಸ್ ಚಿಲ್ಡ್ರನ್ ಎಂದು ಕರೆಯಲಾಗುತ್ತದೆ. ಅವ್ರನ್ನು ರಷ್ಯಾದಲ್ಲಿ ಕೆಳಮಟ್ಟದಲ್ಲಿ ನೋಡಲಾಗುತ್ತದೆ. ಸೋವಿಯತ್ ಒಕ್ಕೂಟದ ಅವಧಿ ಮುಕ್ತಾಯವಾದ್ರೂ ತಾರತಮ್ಯ ಮುಂದುವರೆದಿದೆ.

1980ರ ಸಂಗತಿಯನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ರಷ್ಯಾದ ಮಹಿಳೆಯರು ವಿದೇಶಿ ಪುರುಷರಿಂದ ದೂರವಿರುವುದು ಒಳ್ಳೆಯದು. ಮಕ್ಕಳಿಗೆ ರಷ್ಯಾ ತಂದೆ-ತಾಯಿ ಬೇಕು. ವಿದೇಶಿಯಿಂದ ಹುಟ್ಟಿದ ಮಗುವನ್ನು ರಷ್ಯಾದಲ್ಲಿ ಕೆಟ್ಟದಾಗಿ ನೋಲಾಗುತ್ತದೆ. 1980 ರಿಂದ ಏನೆಲ್ಲ ನಡೆದಿದೆ ಎಂಬುದನ್ನು ನಾನು ನೋಡಿದ್ದೇನೆಂದು ತಮಾರಾ ಪ್ಲೇಟ್ನೋವಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...