alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದುನನ ಜತೆ ಆಸ್ಪತ್ರೆಗೆ ತೆರಳಿದಾಕೆಗೆ ಮನಬಂದಂತೆ ಥಳಿಸಿದರು

3bf4626f77c43ea2df8024013b5c2e13_M

ಇತ್ತೀಚೆಗೆ ಉಗ್ರರ ಅಟ್ಟಹಾಸ ಹೆಚ್ಚುತ್ತಿದ್ದು, ತನ್ನ ಮೈದುನನ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ಯುವತಿಯೊಬ್ಬಳನ್ನು ಪರ ಪುರುಷನೊಂದಿಗೆ ಹೋಗುತ್ತಿದ್ದಾಳೆ ಎಂದು ಭಾವಿಸಿದ ತಾಲಿಬಾನ್ ಉಗ್ರರು, ಆಕೆಗೆ ಸಾರ್ವಜನಿಕವಾಗಿಯೇ ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಆಫ್ಘಾನಿಸ್ತಾನದಲ್ಲಿ ನಡೆದಿದೆ.

ಹೌದು. ಕಾಬೂಲ್‌ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಮಹಿಳೆಯೊಬ್ಬಳು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ತೆರಳುತ್ತಿದ್ದಳು. ಈ ಸಮಯದಲ್ಲಿ ಆಕೆಯ ಮೈದುನ ಜತೆಗೆ ಬಂದಿದ್ದಾನೆ. ಆದರೆ ಈಕೆ ಪರ ಪುರುಷನ ಜತೆ ಹೋಗುತ್ತಿದ್ದಾಳೆ ಎಂದು ತಪ್ಪಾಗಿ ತಿಳಿದ ತಾಲಿಬಾನಿ ಉಗ್ರರು ಆಕೆ ಪ್ರಜ್ಞೆ ತಪ್ಪುವವರೆಗೂ ಸಾರ್ವಜನಿಕವಾಗಿ ಚಾಟಿಯಿಂದ ಹೊಡೆದು ತಮ್ಮ ಕ್ರೌರ್ಯ ಪ್ರದರ್ಶಿಸಿದ್ದಾರೆ.

ಅಷ್ಟೇ ಅಲ್ಲ, ಆಕೆಯ ಮೈದುನನನ್ನೂ ಉಗ್ರರು ಮನಬಂದಂತೆ ಥಳಿಸಿದ್ದು, ಈ ದೃಶ್ಯದ ವಿಡಿಯೊ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡಿರುವ ಉಗ್ರರು, ಅಪರಿಚಿತ ಪುರುಷರ ಜತೆ ತಿರುಗಾಡಿದರೆ ಎಲ್ಲರಿಗೂ ಇದೇ ಶಿಕ್ಷೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...