alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೆ ಶರಣಾದ ಫಿಡೆಲ್ ಕ್ಯಾಸ್ಟ್ರೋ ಮಗ

ಕ್ಯೂಬಾದ ಮಾಜಿ ಅಧ್ಯಕ್ಷ ದಿವಂಗತ ಫಿಡೆಲ್ ಕ್ಯಾಸ್ಟ್ರೋ ಅವರ ಹಿರಿಯ ಪುತ್ರ ಡಯಾಜ್ ಬಲಾರ್ಟ್ ಗುರುವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ 68 ವರ್ಷದ ಡಯಾಜ್ ಬಲಾರ್ಟ್ ಸಾವನ್ನಪ್ಪಿದ್ದಾರೆಂದು ಕ್ಯೂಬನ್ ಮಾಧ್ಯಮಗಳು ವರದಿ ಮಾಡಿವೆ.

ಫಿಡೆಲ್ ಕ್ಯಾಸ್ಟ್ರೋರನ್ನು ಡಯಾಜ್ ಬಲಾರ್ಟ್ ಬಹುತೇಕ ಹೋಲುತ್ತಿದ್ದ ಕಾರಣ ಅವರನ್ನು Fidelito ಎಂದೇ ಗುರುತಿಸಲಾಗುತ್ತಿತ್ತು. ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದ ಡಯಾಜ್ ಹಲವು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಿರಲಿಲ್ಲವೆನ್ನಲಾಗಿದೆ.

ಇದರಿಂದ ಬೇಸತ್ತು ಡಯಾಜ್ ಬಲಾರ್ಟ್ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದ್ದು, ಕ್ಯೂಬನ್ ಅಕಾಡೆಮಿ ಆಫ್ ಸೈನ್ಸ್ ನ ಉಪಾಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...