alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಧಾರಣೆ ಚಿಕಿತ್ಸೆಗೆ ಬಂದವರಿಗೆ ಯಾಮಾರಿಸಿದ್ದ ವೈದ್ಯ

INFERTILITYಇಂಡಿಯಾನಾಪೊಲಿಸ್ ನ ನಿವೃತ್ತ  ತಜ್ಞರೊಬ್ಬರು ಗರ್ಭಧಾರಣೆ ಚಿಕಿತ್ಸೆಗೆ ಬಂದ 50ಕ್ಕೂ ಹೆಚ್ಚು ರೋಗಿಗಳಿಗೆ ತಮ್ಮ ಸ್ವಂತ ವೀರ್ಯ ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ. 77 ವರ್ಷದ ಡಾ.ಡೊನಾಲ್ಡ್ ಕ್ಲೈನ್ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿಲ್ಲ.

ಸುಮಾರು 8 ಮಂದಿಗೆ ಡೊನಾಲ್ಡ್ ಕ್ಲೈನ್ ಬಯೋಲಾಜಿಕಲ್ ತಂದೆಯಾಗಿದ್ದು, ಅವರೆಲ್ಲ ಈಗ 30 ವರ್ಷದ ಆಸುಪಾಸಿನಲ್ಲಿದ್ದಾರೆ. 1970 ರಿಂದೀಚೆಗೆ ಅವರು 50ಕ್ಕೂ ಹೆಚ್ಚು ಮಹಿಳೆಯರಿಗೆ ತಮ್ಮದೇ ವೀರ್ಯ ಅಳವಡಿಸಿದ್ದಾರೆ. ದಾನಿಗಳ ವೀರ್ಯ ಬಳಕೆ ಸಾಧ್ಯವಾಗದೇ ಇದ್ದಾಗಲೆಲ್ಲ ತಾವು ಇದೇ ರೀತಿ ಮಾಡಿರುವುದಾಗಿ ಡೊನಾಲ್ಡ್ ಹೇಳಿದ್ದಾರೆ.

ಡಿಎನ್ಎ ಪರೀಕ್ಷೆಯಲ್ಲಿ ಡೊನಾಲ್ಡ್ ಮೇಲಿನ ಆರೋಪ ಸಾಬೀತಾಗಿದೆ. 2009ರಲ್ಲಿ ಡೊನಾಲ್ಡ್ ವೃತ್ತಿಯಿಂದ ನಿವೃತ್ತರಾಗಿದ್ದು, ಆರಂಭದಲ್ಲಿ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆಯುತ್ತಲೇ ಬಂದಿದ್ದರು. ವಿಯೆನ್ನಾ ಮತ್ತು ವರ್ಜೀನಿಯಾದಲ್ಲಿ ಕೂಡ ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿತ್ತು. ತನ್ನದೇ ವೀರ್ಯ ಬಳಸಿ ಸೆಸಿಲ್ ಜೊಕೋಬ್ಸನ್ ಎಂಬಾತ ಸುಮಾರು 70 ಮಕ್ಕಳಿಗೆ ತಂದೆಯಾಗಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...