alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ಕಾರು ಕದ್ದು ಪೆಟ್ರೋಲ್ ಗಾಗಿ ಭಿಕ್ಷೆ ಬೇಡಿದ…!

ದುಬಾರಿ ಬೆಲೆಯ ಫೆರಾರಿ ಕಾರನ್ನು ಕದ್ದು ಅದಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಭಿಕ್ಷೆ ಬೇಡುತ್ತಿದ್ದ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇಸ್ರೇಲ್ ಪರೆಲ್ ರಂಗೆಲ್ ಎಂಬಾತ 300,000 ಡಾಲರ್ ಮೌಲ್ಯದ ಫೆರಾರಿ ಕಾರನ್ನು ಕಳವು ಮಾಡಿದ್ದ. ಅದನ್ನು ಸರಿಯಾಗಿ ಓಡಿಸಲು ಸಹ ಅವನಿಗೆ ಬರುತ್ತಿರಲಿಲ್ಲ.

ಅವನ ಕೈಗೆ ಸಿಕ್ಕಿದ್ದ ಕಾರು ಸಂಪೂರ್ಣ ಜಖಂ ಆಗಿತ್ತು. ಗೇರ್ ಬಾಕ್ಸ್, ಸೀಟುಗಳು ಸೇರಿದಂತೆ ಎಲ್ಲವನ್ನು ಹಾಳು ಮಾಡಿದ್ದ. ಕಾರಿನ ಒಂದು ಬದಿಯಲ್ಲಿ ವಾಂತಿ ಕೂಡ ಮಾಡಿಬಿಟ್ಟಿದ್ದ. ಆದ್ರೂ ಅದಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಓಡಿಸಬೇಕು ಅನ್ನೋ ಚಟ ಆತನಿಗೆ.

ಇದಕ್ಕಾಗಿ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಫೆರಾರಿ & ಮಸೆರಾಟಿ ನ್ಯೂ ಪೋರ್ಟ್ ಬೀಚ್ ಸರ್ವೀಸ್ ಸೆಂಟರ್ ನಿಂದ ಈ ಕಾರನ್ನು ಕಳವು ಮಾಡಲಾಗಿತ್ತು. ಅಲ್ಲಿನ ಸಿಬ್ಬಂದಿ ಕಾರಿನ ಕೀಲಿಯನ್ನು ಸೀಟಿನ ಮೇಲೆ ಮರೆತುಬಿಟ್ಟಿದ್ದ. ಜಾಕೆಟ್ ತೊಟ್ಟಿದ್ದ ವ್ಯಕ್ತಿ ಆ ಕಾರನ್ನು ಕದ್ದು ಪರಾರಿಯಾಗ್ತಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...