alex Certify
ಕನ್ನಡ ದುನಿಯಾ       Mobile App
       

Kannada Duniya

1.68 ಕೋಟಿ ನೀಡಿ ಖರೀದಿಸಿದ್ದ ಫೆರಾರಿ ಗಂಟೆಯಲ್ಲಿ ಸುಟ್ಟು ಬೂದಿಯಾಯ್ತು..!

ferrari-3

ಫೆರಾರಿ ಕಾರು ಖರೀದಿ ಮಾಡಿ ಕೆಲವೇ ಕೆಲವು ಗಂಟೆಗಳಲ್ಲಿ ಕಾರು ಸುಟ್ಟು ಬೂದಿಯಾಗಿದೆ. ಅಪಘಾತದಲ್ಲಿ ಬ್ರಿಟಿಷ್ ಚಾಲಕ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಇಂಗ್ಲೆಂಡ್ ದಕ್ಷಿಣ ಯಾರ್ಕ್ಷೈರ್ ಪೊಲೀಸರು ತಮ್ಮ ಟ್ವೀಟರ್ ನಲ್ಲಿ ಸುಟ್ಟು ಹೋದ ಫೆರಾರಿ ಕಾರಿನ ಫೋಟೋ ಹಾಕಿದ್ದಾರೆ.

ವ್ಯಕ್ತಿ ಒಂದು ಗಂಟೆ ಮೊದಲು ಕಾರ್ ಖರೀದಿ ಮಾಡಿದ್ದ. ಇಂಗ್ಲೆಂಡಿನ ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ಹೊತ್ತಿ ಉರಿಯುತ್ತಿತ್ತು. ಆದ್ರೆ ಚಾಲಕ ಬಚಾವ್ ಆಗಿದ್ದಾನೆ. ಇದೊಂದು ಪವಾಡವೇ ಸರಿ ಎಂದು ಯಾರ್ಕ್ಷೈರ್ ಪೊಲೀಸರು ತಿಳಿಸಿದ್ದಾರೆ. ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕೇವಲ ಒಂದು ಗಂಟೆ ಹಿಂದೆ ಈ ಕಾರನ್ನು ಖರೀದಿ ಮಾಡಿದ್ದೆ ಎಂದು ಚಾಲಕ ಹೇಳಿದ್ದಾನೆ. ಫೆರಾರಿ ಕಾರಿನ ಬೆಲೆ 1.68 ಕೋಟಿ ರೂಪಾಯಿ. ಇಷ್ಟಪಟ್ಟು ಕೋಟಿ ಹಣ ನೀಡಿ ಕಾರು ಖರೀದಿ ಮಾಡಿದ್ದ. ಆದ್ರೆ ಕೇವಲ ಒಂದು ಗಂಟೆಯಲ್ಲಿ ಕಾರು ಸುಟ್ಟು ಕರಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...