alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಮೃಗಾಲಯದಲ್ಲಿ ನಡೆದಿದೆ ಭಯಾನಕ ಘಟನೆ

hamerton-zoo-park_650x400_81496111442

ಇಂಗ್ಲೆಂಡ್ ನಲ್ಲಿ ಮೃಗಾಲಯದ ಮಹಿಳಾ ಸಿಬ್ಬಂದಿಯೊಬ್ಳು ಹುಲಿ ದಾಳಿಗೆ ಬಲಿಯಾಗಿದ್ದಾಳೆ. ಹ್ಯಾಮರ್ಟನ್ ಝೂ ಪಾರ್ಕ್ ನಲ್ಲಿ ಈ ಅವಘಡ ಸಂಭವಿಸಿದೆ. ಮಹಿಳಾ ಸಿಬ್ಬಂದಿ ಕೆಲಸ ಮಾಡ್ತಾ ಇದ್ದ ವೇಳೆ ಇದ್ದಕ್ಕಿದ್ದಂತೆ ಹುಲಿಯೊಂದು ಆವರಣ ಪ್ರವೇಶಿಸಿದೆ.

ಆಕೆಗೆ ತಪ್ಪಿಸಿಕೊಳ್ಳಲು ವ್ಯಾಘ್ರ ಅವಕಾಶ ಕೊಟ್ಟಿಲ್ಲ. ಮಹಿಳೆ ಮೇಲೆ ದಾಳಿ ನಡೆಸಿದೆ. ಹುಲಿ ದಾಳಿಯಿಂದ ತೀವ್ರ ಗಾಯಗೊಂಡ ಮಹಿಳಾ ಸಿಬ್ಬಂದಿ ಮೃತಪಟ್ಟಿದ್ದಾಳೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಇದೊಂದು ಭಯಾನಕ ಘಟನೆ ಅಂತಾ ಹೇಳಿದ್ದಾರೆ.

ಇದುವರೆಗೂ ಮೃಗಾಲಯದಲ್ಲಿ ಇಂತಹ ಅನಾಹುತ ನಡೆದಿರಲಿಲ್ಲ. ಯಾವ ಪ್ರಾಣಿಯೂ ಬೋನಿನಿಂದ ತಪ್ಪಿಸಿಕೊಂಡಿರಲಿಲ್ಲ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. 25 ಎಕರೆ ವಿಸ್ತಾರವಾದ ಮೃಗಾಲಯ ಇದಾಗಿದ್ದು, ಮಲೇಷಿಯಾ ಮತ್ತು ಬಂಗಾಳದ ಹುಲಿಗಳು ಇಲ್ಲಿ ಅಧಿಕ ಸಂಖ್ಯೆಯಲ್ಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...