alex Certify
ಕನ್ನಡ ದುನಿಯಾ       Mobile App
       

Kannada Duniya

ಉಸಿರು ನಿಲ್ಲಿಸಿದ ವೃದ್ಧನಿಗೆ ಜೀವ ದಾನ ಮಾಡಿದ್ಲು ಹುಡುಗಿ

ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ಧೈರ್ಯದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ 81 ವರ್ಷದ ವೃದ್ಧನಿಗೆ ಪ್ರಾಯದ ಹುಡುಗಿ ಜೀವದಾನ ಮಾಡಿದ್ದಾಳೆ. ಈ ವಿಡಿಯೋ ಚೀನಾದ ಕ್ಸಿನ್ಹುವಾ ಪ್ರಾಂತ್ಯದ್ದಾಗಿದೆ.

ರಸ್ತೆ ಮೇಲೆ ಹೋಗ್ತಿದ್ದ 81 ವರ್ಷದ ವೃದ್ಧ ಕೆಳಗೆ ಕುಸಿದು ಬೀಳ್ತಾನೆ. ದಾರಿಯಲ್ಲಿ ಹೋಗ್ತಿದ್ದವರು ಹತ್ತಿರ ಹೋಗಿ ನೋಡ್ತಾರೆ. ಅಷ್ಟರಲ್ಲೇ ವೃದ್ಧ ಉಸಿರಾಟ ನಿಲ್ಲಿಸಿದ್ದ. ಈ ವೇಳೆ ಅಲ್ಲಿಗೆ ಬರುವ ಹುಡುಗಿ ಆತನ ಎದೆ ಮೇಲೆ ಕುಳಿತು ಬಾಯಿ ಮೂಲಕ ಉಸಿರು ನೀಡುವ ಪ್ರಯತ್ನ ಮಾಡ್ತಾಳೆ.

ಹುಡುಗಿ ಈ ಕೆಲಸವನ್ನು ಅಕ್ಕಪಕ್ಕದಲ್ಲಿದ್ದವರು ವಿರೋಧಿಸುತ್ತಾರೆ. ಆದ್ರೆ ಇದಕ್ಕೆ ತಲೆಗೆಡಿಸಿಕೊಳ್ಳದ ಹುಡುಗಿ ಕೆಲಸ ಮುಂದುವರೆಸ್ತಾಳೆ. ಕೆಲವೇ ಸಮಯದಲ್ಲಿ ವೃದ್ಧ ಮತ್ತೆ ಉಸಿರಾಡಲು ಶುರು ಮಾಡ್ತಾನೆ. ಯಾವುದೇ ಪರಿಸ್ಥಿತಿಯಲ್ಲೂ ನಾವು ಸೋಲೊಪ್ಪಿಕೊಳ್ಳಬಾರದು. ಎಂಥ ಕಠಿಣ ಪರಿಸ್ಥಿತಿಯಲ್ಲಾದ್ರೂ ಹೋರಾಟ ನಡೆಸಬೇಕು. ಇದಕ್ಕೆ ಈ ಹುಡುಗಿ ಉತ್ತಮ ಉದಾಹರಣೆ ಎನ್ನುತ್ತಿದ್ದಾರೆ ಜನರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...