alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಸಾಂಗ್ ನಲ್ಲಿ ಅಶ್ಲೀಲವಾಗಿ ಬಾಳೆಹಣ್ಣು ತಿಂದು ಜೈಲು ಸೇರಿದ ಗಾಯಕಿ…!

ವಿಡಿಯೋ ಹಾಡಿನಲ್ಲಿ ಹಣ್ಣನ್ನು ತಿನ್ನುತ್ತಿರುವ ಗಾಯಕಿಯೊಬ್ಬಳಿಗೆ ಜೈಲು ಶಿಕ್ಷೆಯಾಗಿದೆ. ಆಶ್ಚರ್ಯವಾದ್ರೂ ಇದು ಸತ್ಯ. ಈಜಿಪ್ಟ್ ಗಾಯಕಿ ಷೈಮಾ ಅಹಮ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಶಾಲಾ ಶಿಕ್ಷಕಿ ಪಾತ್ರದಲ್ಲಿ ಷೈಮಾ ಇದ್ದರೆ ವಯಸ್ಕರು ವಿದ್ಯಾರ್ಥಿಗಳಾಗಿದ್ದಾರೆ. ಈ ಹಾಡಿನಲ್ಲಿ ಹಣ್ಣನ್ನು ಅಶ್ಲೀಲವಾಗಿ ತಿನ್ನುತ್ತಿರುವ ದೃಶ್ಯವಿದೆ. ಈ ಹಾಡಿನಲ್ಲಿ ಷೈಮಾ ಹಣ್ಣು ತಿನ್ನುವ ಶೈಲಿಯನ್ನು ವಿದ್ಯಾರ್ಥಿಗಳು ಅನುಸರಿಸುತ್ತಿದ್ದಾರೆ. ಈ ವಿಡಿಯೋ ಸಮಾಜಕ್ಕೆ ಹಾನಿಕಾರಕ ಎನ್ನುವ ಕಾರಣಕ್ಕೆ ಷೈಮಾಳನ್ನು ಬಂಧಿಸಲಾಗಿದೆ.

ವಿಡಿಯೋದಲ್ಲಿ ಷೈಮಾ ಹಾಟ್ ಡ್ರೆಸ್ ತೊಟ್ಟಿದ್ದಾಳೆ. ಇದು ಕೂಡ ಕಾನೂನಿಗೆ ವಿರುದ್ಧವೆಂದು ಪರಿಗಣಿಸಲಾಗಿದೆ. ವಿಚಾರಣೆ ನಂತ್ರ ಷೈಮಾಗೆ 3 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಷೈಮಾಳಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಿರ್ಬಂಧ ಹೇರಲಾಗಿದೆ.

21 ವರ್ಷದ ಷೈಮಾ ಇದಕ್ಕೆ ಕ್ಷಮೆ ಕೇಳಿದ್ದಾಳೆ. ವಿಡಿಯೋ ಮೂಲಕ ಅನೇಕರಿಗೆ ನೋವುಂಟು ಮಾಡಿದ್ದು, ಕ್ಷಮೆ ಕೇಳುತ್ತೇನೆಂದು ಷೈಮಾ ಹೇಳಿದ್ದಾಳೆ. ಈಜಿಪ್ಟ್ ನಲ್ಲಿ ಈ ವಿಡಿಯೋಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ. ಹಾಗಾಗಿ ಯುಟ್ಯೂಬ್ ಕೂಡ ಈ ವಿಡಿಯೋವನ್ನು ತೆಗೆದು ಹಾಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...