alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೇನ್ ಗಡಿಯಲ್ಲಿ ನುಸುಳಲು ಈಕೆ ಮಾಡಿದ್ದೇನು…?

suitcase

ಮೊರಕ್ಕೋದಿಂದ ವಲಸೆ ಬಂದಿದ್ದ 19 ವರ್ಷದ ಯುವತಿಯೊಬ್ಳು ಸೂಟ್ ಕೇಸ್ ನಲ್ಲಿ ಅಡಗಿ ಕುಳಿತು ಸ್ಪೇನ್ ಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಳೆ. ಸ್ಪೇನ್ ನ ಸ್ಯೂಟಾದಲ್ಲಿ ಈಕೆಯನ್ನು ಬಂಧಿಸಲಾಗಿದೆ.

2017 ನೇ ವರ್ಷ ಆರಂಭವಾಗಿ ಕೆಲವೇ ಗಂಟೆಗಳು ಕಳೆಯುವಷ್ಟರಲ್ಲಿ 1100ಕ್ಕೂ ಹೆಚ್ಚು ವಲಸಿಗರು ಅಕ್ರಮವಾಗಿ  ಸ್ಪೇನ್ ಗಡಿದಾಟಲು ಪ್ರಯತ್ನಿಸಿದ್ದಾರೆ.

ಕೆಲವರು ಗಡಿಯಲ್ಲಿದ್ದ ಪೊಲೀಸರ ವಶವಾದ್ರೆ ಇನ್ನು ಕೆಲವರು ಬಾರ್ಡರ್ ನಲ್ಲಿ ಹಾಕಿದ್ದ ಮುಳ್ಳು ತಂತಿ ಬೇಲಿಗೆ ಸಿಕ್ಕಿಹಾಕಿಕೊಂಡಿದ್ರು. ಈ ವೇಳೆ ಗಾಯಗೊಂಡಿದ್ದ ಇಬ್ಬರಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ಸ್ಯೂಟಾದ ಒಳಪ್ರವೇಶಿಸಲು ಅನುಮತಿ ನೀಡಲಾಗಿದೆ.

ಸ್ಪೇನ್ ನ ಸ್ಯೂಟಾ ಮತ್ತು ಮಲಿಲ್ಲಾದಲ್ಲಿ ಆಫ್ರಿಕಾದ ವಲಸಿಗರು ಸದಾ ಕಾಲ ಅಕ್ರಮವಾಗಿ ನುಸುಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಆದ್ರೆ ಅವರನ್ನೆಲ್ಲ ಮರಳಿ ಮೊರಕ್ಕೋ ಕಡೆಗೆ ಅಟ್ಟಿರುವ ಸ್ಪೇನ್ ಕ್ರಮವನ್ನು ಕೆಲ ಮಾನವ ಹಕ್ಕು ಸಂಘಟನೆಗಳು ಟೀಕಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...