alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ ! ಸಂತಾನೋತ್ಪತ್ತಿಗೆ ಗಂಡು ಬೇಕೇ ಇಲ್ಲ..!!

bamboo shark

ಜೀವವಿಕಾಸ ಪ್ರಕ್ರಿಯೆಯಲ್ಲಿ ಗಂಡು- ಹೆಣ್ಣು ಮಿಲನವಾಗಿ, ಗರ್ಭ ಧರಿಸುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಜೀವವಿಕಾಸದಲ್ಲಿ ಅಚ್ಚರಿಯ ಘಟನೆಗಳೂ ನಡೆಯುತ್ತವೆ. ಗಂಡಿನ ಅವಶ್ಯಕತೆ ಇಲ್ಲದೆಯೂ ಗರ್ಭ ಧರಿಸಬಹುದಾದ ಪ್ರಕರಣವೊಂದು ಇಂಗ್ಲೆಂಡ್ ನಲ್ಲಿ ನಡೆದಿದೆ.

ಲಂಡನ್ ನಲ್ಲಿ ಗಂಡು ಶಾರ್ಕ್ ಜೊತೆಗೆ ಮಿಲನವಾಗದೆಯೂ ಗರ್ಭ ಧರಿಸಿದ್ದು, ಜೀವವಿಕಾಸದಲ್ಲಿಯೇ ಇದು ಮೊದಲನೆಯ ಪ್ರಕರಣ ಎನ್ನಲಾಗಿದೆ. ಲಂಡನ್ ನಲ್ಲಿರುವ ಯಾರ್ ಮತ್ ಸೀ ಲೈಫ್ ಸೆಂಟರ್ ನಲ್ಲಿ ಬ್ಯಾಂಬೂ ಶಾರ್ಕ್ ಗಂಡಿನ ಸಂಪರ್ಕ ಇಲ್ಲದೇ, ತನ್ನ ಪಾಡಿಗೆ ತಾನೇ ಜನನ ಕ್ರಿಯೆ ನಡೆಸಿಕೊಂಡು ಮೊಟ್ಟೆ ಇಟ್ಟಿದೆ. ಅಚ್ಚರಿ ಎಂದರೆ, ಸುಮಾರು ಎರಡು ವರ್ಷಗಳಿಂದ ಈ ಶಾರ್ಕ್ ಗಂಡಿನಿಂದ ದೂರವೇ ಇತ್ತು. ಇದೀಗ ತನ್ನಿಂತಾನೇ ಮೊಟ್ಟೆ ಇಟ್ಟಿದೆ. ಇದೊಂದು ಅಪರೂಪದ ಘಟನೆ ಎಂದು ಹೇಳಲಾಗಿದೆ.

ಫರ್ಥೆನೋ ಜಿನೆಸಿಸ್ ಎಂದು ಜೀವವಿಜ್ಞಾನದಲ್ಲಿ ಈ ಪ್ರಕ್ರಿಯೆಗೆ ಕರೆಯಲಾಗುತ್ತದೆ. ಇದುವರೆಗೂ ಈ ರೀತಿ ನಡೆಯಬಹುದೆಂದು ನಂಬಲಾಗಿತ್ತಾದರೂ ವೈಜ್ಞಾನಿಕವಾಗಿ ದೃಢಪಟ್ಟಿರಲಿಲ್ಲ. ಶಾರ್ಕ್ ತಜ್ಞ ಡರೆನ್ ಗೂಕ್ ಅವರು, ಈ ಶಾರ್ಕ್ ಇಟ್ಟಿರುವ ಎರಡು ಮೊಟ್ಟೆಗಳನ್ನು ಸಂರಕ್ಷಿಸಿ ಯಾಂತ್ರಿಕವಾಗಿ ಕಾವು ಕೊಡಲಾಗುತ್ತಿದೆ. ಅವುಗಳಿಂದ ಮರಿ ಹೊರಬರುವುದನ್ನು ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...