alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಂತ ಖಾರದ ಮೆಣಸು ತಿಂದವನ ಕಥೆ ಏನಾಯ್ತು ಗೊತ್ತಾ?

ತಿಂಡಿಪೋತರಿಗಾಗಿಯೇ ಕೆಲವೊಂದು ಸ್ಪರ್ಧೆಗಳಿರುತ್ತವೆ. ಆದ್ರೆ ಮೆಣಸಿನಕಾಯಿ ತಿನ್ನುವ ಸ್ಪರ್ಧೆ ಮಾತ್ರ ತುಂಬಾನೇ ಅಪಾಯಕಾರಿ. ಯಾಕಂದ್ರೆ ಅಮೆರಿಕದಲ್ಲಿ ಖಾರದ ಮೆಣಸಿನಕಾಯಿ ತಿಂದು ವ್ಯಕ್ತಿಯೊಬ್ಬ ಆಸ್ಪತ್ರೆ ಸೇರಿದ್ದಾನೆ.

ನ್ಯೂಯಾರ್ಕ್ ನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 34 ವರ್ಷದ ವ್ಯಕ್ತಿಯೊಬ್ಬ ಕೆರೊಲಿನಾ ರೀಪರ್ ಎಂಬ ಜಗತ್ತಿನ ಅತ್ಯಂತ ಖಾರದ ಕೆಂಪು ಮೆಣಸಿನಕಾಯಿಯನ್ನು ತಿಂದಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಅವನ ಆರೋಗ್ಯ ಹದಗೆಟ್ಟಿದೆ.

ಹೊಟ್ಟೆಯಲ್ಲಿ ತೀವ್ರ ಉರಿ ಕಾಣಿಸಿಕೊಂಡಿತ್ತು. ಕತ್ತು ಮತ್ತು ತಲೆಯಲ್ಲಿ ಸಹ ವಿಪರೀತ ನೋವಿನಿಂದ ಆತ ಒದ್ದಾಡಲಾರಂಭಿಸಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಈ ಖಾರದ ಮೆಣಸು ತಿಂದಿದ್ದರಿಂದ ಆತನ ಶರೀರದಲ್ಲಿನ ನರ ವ್ಯವಸ್ಥೆಗೆ ಹೊಡೆತ ಬಿದ್ದಿದೆ.

ಮೆದುಳಿಗೆ ರಕ್ತ ಸಂಚಾರ ಮಾಡುತ್ತಿದ್ದ ನಾಳವೇ ಚಿಕ್ಕದಾಗಿಬಿಟ್ಟಿದೆಯಂತೆ. RCVS ಎಂಬ ಮೆದುಳಿನ ಸಮಸ್ಯೆಯಿಂದ ಆತ ಈಗ ಬಳಲುತ್ತಿದ್ದಾನೆ. ಹಾಗಾಗಿ ದಾಖಲೆಯ ಹುಚ್ಚಿಗೆ ಬಿದ್ದು ಈ ಅಪಾಯಕಾರಿ ಮೆಣಸನ್ನು ತಿನ್ನದಂತೆ ವೈದ್ಯರು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...