alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತವ ಮಾಡಿದ್ದೇನು ಗೊತ್ತಾ..?

ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಾಗ ನೀವೆಲ್ಲ ಏನ್ಮಾಡ್ತೀರಾ? ಒಬ್ಬರಿಗೊಬ್ರು ಹಿಡಿಶಾಪ ಹಾಕೋದು, ಸಿಗರೇಟ್ ಸೇದೋದು ಇವೆಲ್ಲ ಮಾಮೂಲು. ಆದ್ರೆ ಚೀನಾದಲ್ಲಿ ವ್ಯಕ್ತಿಯೊಬ್ಬ ಮಾಡಿರೋ ಕೆಲಸ ನೋಡಿದ್ರೆ ಎಂಥವರಿಗೂ ಪ್ರೇರಣೆ ಸಿಗಲಿದೆ.

ಸಮಯವನ್ನು ಸದುಪಯೋಗಪಡಿಸಿಕೊಳ್ಳೋದು ಹೇಗೆ ಅನ್ನೋದನ್ನು ಇವನಿಂದ ಕಲಿಯಬೇಕು. ಆದ್ರೆ ಅದರಲ್ಲೂ ಈತ ಯಡವಟ್ಟು ಮಾಡ್ಕೊಂಡು ದಂಡ ಕಟ್ಟಿದ್ದಾನೆ. ಟ್ರಾಫಿಕ್ ಜಾಮ್ ನಿಂದ ಬೇಸತ್ತಿದ್ದ ಈ ವ್ಯಕ್ತಿ ಆ ದಿನ ಪೇಂಟ್ ಡಬ್ಬ ಹಾಗೂ ಬ್ರಷ್ ಹಿಡಿದು ಬಂದಿದ್ದ.

ವಾಹನದಿಂದ ಕೆಳಗಿಳಿದು ರಸ್ತೆಯ ಮೇಲೆ ತನಗಿಷ್ಟ ಬಂದಂತೆ ರೋಡ್ ಮಾರ್ಕಿಂಗ್ ಗಳನ್ನೆಲ್ಲ ಪೇಂಟ್ ಮಾಡಿದ್ದಾನೆ. ಜಾಮ್ ಆಗಿರೋ ವಾಹನಗಳನ್ನೆಲ್ಲ ಬೇರೆ ದಿಕ್ಕಿಗೆ ಡೈವರ್ಟ್ ಮಾಡಿಬಿಟ್ಟಿದ್ದಾನೆ. ಬ್ಯುಸಿ ರೋಡ್ ನಲ್ಲಿ ಆತ ಪೇಂಟ್ ಬಳಿಯುತ್ತಿರುವ ದೃಶ್ಯ ಕ್ಯಾಮರಾದಲ್ಲೂ ಸೆರೆಯಾಗಿತ್ತು.

ಅದನ್ನು ನೋಡಿದ ಸಂಚಾರಿ ಪೊಲೀಸರು ಆತನಿಗೆ 10,000 ಯುವಾನ್ ದಂಡ ಹಾಕಿದ್ದಾರೆ. ನೀನಿನ್ನೂ ಯುವಕ, ಜೊತೆಗೆ ಪ್ರಾಮಾಣಿಕ ಅನ್ನೋ ಕಾರಣಕ್ಕೆ ಬಿಟ್ಟು ಕಳಿಸ್ತಿದ್ದೇವೆ, ಇಲ್ಲವಾದ್ರೆ ಬಂಧಿಸೋದು ಗ್ಯಾರಂಟಿ ಅಂತಾನೂ ವಾರ್ನ್ ಮಾಡಿದ್ದಾರೆ. ದಂಡ ಕಟ್ಟಿದ ಬಳಿಕ ಆತನನ್ನು ಬಿಟ್ಟು ಕಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...