alex Certify
ಕನ್ನಡ ದುನಿಯಾ       Mobile App
       

Kannada Duniya

ನಿಬ್ಬೆರಗಾಗಿಸುವಂಥ ಸ್ಟಂಟ್ ಮಾಡ್ತಾಳೆ 85 ವರ್ಷದ ಅಜ್ಜಿ

85 ವರ್ಷ ಅಂದ್ರೆ ವೃದ್ಧಾಪ್ಯ ಆವರಿಸಿಕೊಂಡಿರುತ್ತೆ. ಆಗ ಜೋರಾಗಿ ನಡೆಯೋದು ಕೂಡ ಕಷ್ಟ. ಆದ್ರೆ ಟ್ರಿಶ್ ವಾಗ್ಸ್ಟಾಫ್ ಅನ್ನೋ 85ರ ಹರೆಯದ ಈ ಮಹಿಳೆ ನಂಬಲಸಾಧ್ಯವಾದ ಸಾಹಸಗಳನ್ನು ಮಾಡ್ತಾಳೆ. ಸ್ಕೈ ಡೈವಿಂಗ್, ಪ್ಯಾರಾಗ್ಲೈಡಿಂಗ್, ಸ್ವಿಮ್ಮಿಂಗ್ ಹಾಗೂ ವಿಂಗ್ ವಾಕಿಂಗ್ ಇವಳ ನೆಚ್ಚಿನ ಹವ್ಯಾಸಗಳು.

ಈ ಇಳಿವಯಸ್ಸಿನಲ್ಲೂ ಇಂತಹ ಸಾಹಸ ಮಾಡೋ ಮಹಿಳೆ, ತನ್ನ ಸ್ಟಂಟ್ ಗಳಿಂದ ಸಂಗ್ರಹವಾದ ಹಣವನ್ನೆಲ್ಲ ದಾನ ಮಾಡ್ತಾಳೆ. ಸುಮಾರು 10 ವರ್ಷಗಳಿಂದ 150,000 ಪೌಂಡ್ ಹಣವನ್ನು ಚಾರಿಟಿಗೆ ನೀಡಿದ್ದಾಳೆ.

2002ರಲ್ಲಿ ಟ್ರಿಶ್ ಗೆ ಹಿಪ್ ಬದಲಾಯಿಸಲಾಗಿತ್ತು. ಇನ್ಮೇಲೆ ನಡೆಯೋದು ಕೂಡ ಆಕೆಗೆ ಕಷ್ಟ ಅಂತಾನೇ ಎಲ್ಲರೂ ಭಾವಿಸಿದ್ರು. ಪತಿಯನ್ನು ಕೂಡ ಕಳೆದುಕೊಂಡಿದ್ರಿಂದ ಆ ನೋವನ್ನು ಮರೆಯಲು ಟ್ರಿಶ್ ಈ ಸಾಹಸಮಯ ಕ್ರೀಡೆಗಳ ಮೊರೆ ಹೋದ್ಲು. ವಯಸ್ಸು ಬೇರೆ ಆಗಿದ್ರಿಂದ ಮನೆಯವರಿಗೆ ಆತಂಕವಿತ್ತು.

ಆದ್ರೆ ಟ್ರಿಶ್ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಆತ್ಮವಿಶ್ವಾಸದಿಂದ ಅಪಾಯಕಾರಿ ಸ್ಟಂಟ್ ಗಳನ್ನು ಮಾಡಿ ತೋರಿಸಿದ್ದಾಳೆ. ಟ್ರಿಶ್, ಸಮುದ್ರದಲ್ಲಿ ಶಾರ್ಕ್ ಗಳ ಜೊತೆಗೆ ಈಜುತ್ತಿದ್ರೆ ಆಕೆಯ ಮಗನಿಗೆ ಆತಂಕವಾಗುತ್ತಿತ್ತಂತೆ. ಈಗಲೂ ಅದನ್ನು ಟ್ರಿಶ್ ನೆನಪಿಸಿಕೊಳ್ತಾಳೆ.

ಆಕೆಯ ಪತಿ ಸೇನಾಧಿಕಾರಿಯಾಗಿದ್ದ. ಹಾಗಾಗಿ ಟ್ರಿಶ್ ಗೆ ಈ ಸಾಹಸ ಕ್ರೀಡೆಗಳಲ್ಲಿರೋ ಅಪಾಯದ ಅರಿವಿತ್ತು. ಈ ಅಜ್ಜಿಯ ಸ್ಟಂಟ್ ನೋಡಿದ್ರೆ ಯುವಜನತೆ ಕೂಡ ನಾಚಿಕೊಳ್ಳಬೇಕು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...