alex Certify
ಕನ್ನಡ ದುನಿಯಾ       Mobile App
       

Kannada Duniya

13 ವರ್ಷದ ಬಳಿಕ‌ ಪತ್ತೆಯಾಯ್ತು ದುಬಾರಿ ಶೂ…!

ಚಪ್ಪಲಿ, ಶೂ ಕಳೆದುಹೋದರೆ, ಇನ್ನೊಂದು ಜೊತೆ ಖರೀದಿಸುವ ಕಾಲದಲ್ಲಿ, ಒಂದು ಜತೆ ಶೂಗಾಗಿ ಪೊಲೀಸರು ಸುಮಾರು 12 ವರ್ಷ ಅವಿರತ ಶ್ರಮ ವಹಿಸಿ, ಕೊನೆಗೂ ಶೂ ಹುಡುಕಿದ್ದೇವೆ ಎಂದು ಎದೆಯುಬ್ಬಿಸಿ ಹೇಳಿದ್ದಾರೆ.

ಅರೇ, ಶೂಗಾಗಿ ಏಕಿಷ್ಟು ಸರ್ಕಸ್ ಎನ್ನುವವರು ಈ ಸ್ಪೆಷಲ್ ಶೂ ಬೆಲೆಯನ್ನೊಮ್ಮೆ ನೋಡಿದರೆ ಗೊತ್ತಾಗುತ್ತದೆ.‌ ಸುಮಾರು ಒಂದು ಮಿಲಿಯನ್ ಡಾಲರ್ ಮೊತ್ತದ ಈ ಶೂ, ಭಾರಿ ಪ್ರಚಾರ ಗಿಟ್ಟಿಸಿದ್ದ “ದಿ ವಿಝಾರ್ಡ್ ಆಫ್ ಓಝ್” ಚಿತ್ರದಲ್ಲಿ ನಾಯಕಿ ಬಳಸುತ್ತಿದ್ದ ಶೂ ಆಗಿತ್ತು.

2005 ರ ಆ.28ರಂದು ಕಳುವಾಗಿದ್ದ ಈ ಶೂ ಹುಡುಕಾಟದಲ್ಲಿ ಅನೇಕ ವರ್ಷ ಸವೆಸಿರುವ ಅಮೆರಿಕಾ ಪೊಲೀಸರಿಗೆ ಕೊನೆಗೆ ವಸ್ತು ಸಂಗ್ರಹಾಲಯದಲ್ಲಿ ಇರುವುದು ಖಚಿತವಾಗಿದೆ. ಅದನ್ನು ಖಾತ್ರಿಪಡಿಸಿಕೊಂಡು, ಮಿನಿಸೋಟಾದ ಗ್ರಾಂಡ್ ರ್ಯಾಪಿಡ್ ನಲ್ಲಿರುವ ಗಾರ್ಲ್ಯಾಂಡ್ ವಸ್ತು ಸಂಗ್ರಹಾಲಯದ ಪ್ರತ್ಯೇಕ ಗಾಜಿನ ಕೋಣೆಯಲ್ಲಿ ಇಡಲಾಗಿದ್ದ ಶೂಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಎಫ್ಬಿಐ ಪೊಲೀಸ್ ತಂಡ, ಶೂ ಇರಿಸಲಾಗಿದ್ದ ಕೇಸ್ ನ್ನು ಬೇಸ್ ಬಾಲ್ ಬ್ಯಾಟ್ನಿಂದ ಛಿದ್ರಗೊಳಿಸಿ, ಅತಿ ವಿರಳ ಹರಳುಗಳಿಂದ ಸಜ್ಜಾಗಿರುವ ಈ ಐತಿಹಾಸಿಕ ಶೂ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಶೂ ವಶಕ್ಕೆ ಪಡೆದಿರುವ ಪೊಲೀಸರು, ಇದನ್ನು ವಸ್ತು ಸಂಗ್ರಹಾಲಯಕ್ಕೆ ನೀಡಿರುವ ವ್ಯಕ್ತಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲಿಯೇ ಅವರನ್ನು ಬಂಧಿಸುವ ವಿಶ್ವಾಸದಲ್ಲಿದ್ದಾರೆ.

ಎಂಜಿಎಂ ಫಿಲ್ಮ್ 1939 ರಲ್ಲಿ ಈ ರೀತಿಯ ವಿಶೇಷ ಹರಳಿನ ಮೂರು ಜತೆ ಶೂಗಳನ್ನು ತಯಾರಿಸಿತ್ತು. ಇದರಲ್ಲಿ ಒಂದು ಶೂ 1970 ರಲ್ಲಿ ಎಂಜಿಎಂನಲ್ಲಿರುವ ವಾರ್ಡ್ ರೋಬ್ ನಲ್ಲಿಯೇ ದೊರೆತಿತ್ತು. ಇನ್ನೊಂದು ಜೊತೆ ಅಲ್ಲಿನ ಬೇಸ್ ಮೆಂಟ್ ನಲ್ಲಿ ದೊರಕಿತ್ತು. ಈಗ ದೊರೆಯಬೇಕಿದ್ದ ಬಾಕಿ ಒಂದು ಜತೆ ಶೂ ಮಂಗಳವಾರ ದೊರೆತಿದೆ ಎನ್ನುವ ಮಾತನ್ನು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳುವಾಗಿದ್ದ ಈ ಶೂ ಸಿದ್ಧಪಡಿಸಲು 15 ಸಾವಿರ ಡಾಲರ್ ಖರ್ಚಾಗಿದ್ದು, ಇದೀಗ ಇದರ ಮೊತ್ತ ಒಂದು ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...