alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಳಗೆ ಬಿದ್ದ ಗನ್ ಎತ್ತಿಕೊಳ್ಳಲು ಹೋದಾಗಲೇ ನಡೆದಿದೆ ಅವಘಡ

ನೈಟ್ ಕ್ಲಬ್ ನಲ್ಲಿ ಕುಣಿಯುತ್ತಿದ್ದ ಎಫ್ ಬಿ ಐ ಏಜೆಂಟನೊಬ್ಬ, ಕುಣಿಯುವ ಭರದಲ್ಲಿ ಗನ್ ಬೀಳಿಸಿಕೊಂಡಿದ್ದು, ಅದನ್ನು ಎತ್ತಿಕೊಳ್ಳಲು ಹೋದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಓರ್ವ ಗಾಯಗೊಂಡಿದ್ದಾನೆ.

ಅಮೇರಿಕಾದ ಡೆನ್ವರ್ ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ತನ್ನ ಸೊಂಟದಲ್ಲಿ ಗನ್ ಸಿಗಿಸಿಕೊಂಡೇ ಈ ಎಫ್ ಬಿ ಐ ಏಜೆಂಟ್, ಡಾನ್ಸ್ ಫ್ಲೋರ್ ನಲ್ಲಿ ಕುಣಿಯುತ್ತಿದ್ದ. ಈ ವೇಳೆ ಆತನ ಗನ್ ಕೆಳಗೆ ಬಿದ್ದಿದ್ದು, ಗಡಿಬಿಡಿಯಲ್ಲಿ ಎತ್ತಿಕೊಳ್ಳಲು ಮುಂದಾಗಿದ್ದಾನೆ.

ಈ ಆತುರದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿ ಸನಿಹದಲ್ಲಿದ್ದ ವ್ಯಕ್ತಿಯೊಬ್ಬನ ಕಾಲಿಗೆ ತಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಎಫ್ ಬಿ ಐ ಏಜೆಂಟನನ್ನು ಪೊಲೀಸರು ಇನ್ನು ಬಂಧಿಸಿಲ್ಲವಾದರೂ ತನಿಖೆ ನಡೆಸಲಿದ್ದೇವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...