alex Certify
ಕನ್ನಡ ದುನಿಯಾ       Mobile App
       

Kannada Duniya

10 ತಿಂಗಳಲ್ಲಿ 28 ಕೆ.ಜಿಯಾಗಿದೆ ಮಗುವಿನ ತೂಕ..!

ಮೆಕ್ಸಿಕೋದಲ್ಲಿ ಏರುತ್ತಿರುವ ಬಾಲಕನ ತೂಕ ವೈದ್ಯ ಲೋಕಕ್ಕೆ ಸವಾಲಾಗಿದೆ. 10 ತಿಂಗಳ ಬಾಲಕನ ತೂಕ 28 ಕೆ.ಜಿಯಾಗಿದೆ. ಆರಂಭದಲ್ಲಿ ಮಗು ಆರೋಗ್ಯವಾಗಿದ್ದ ಕಾರಣ ಆತನ ತೂಕ ಏರುತ್ತಿದೆ ಎಂದು ಪಾಲಕರು ತಿಳಿದುಕೊಂಡಿದ್ದರು. ಆದ್ರೆ ನೋಡ್ತಾ ನೋಡ್ತಾ ಇದ್ದಂತೆ ತೂಕ ಏರಿದ್ದರಿಂದ ಪಾಲಕರು ಕಂಗಾಲಾಗಿದ್ದಾರೆ.

ಫೆಸಿಫಿಕ್ ನ ಕರಾವಳಿಯ ಕೊಲಿಮಾದಲ್ಲಿ ಲೂಯಿಸ್ ಮ್ಯಾನುಯೆಲ್ ಗೊನ್ಜಾಲ್ಸ್ ಹೆಸರಿನ ಬಾಲಕ ಈ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಹುಟ್ಟಿದಾಗ ಲೂಯಿಸ್ ಮೂರು ಕೆ.ಜಿಯಿದ್ದ. ನಂತ್ರ ಆತನ ತೂಕ ಹೆಚ್ಚಾಗಿದೆ. ಲೂಯಿಸ್ ಜನಿಸಿ ಎರಡು ತಿಂಗಳಿಗೆ ಎರಡು ವರ್ಷದ ಮಗುವಿನಷ್ಟು ತೂಕ ಹೊಂದಿದ್ದ.

ಎರಡು ತಿಂಗಳಿಗೆ 10 ಕೆ.ಜಿ ಏರಿದ ಬಾಲಕ ಮೂರು ತಿಂಗಳಿಗೆ 18 ಕೆ.ಜಿಯಾಗಿದ್ದಾನೆ. ಭಯಗೊಂಡ ಪಾಲಕರು ಬಾಲಕನನ್ನು ವೈದ್ಯರಿಗೆ ತೋರಿಸಿದ್ದಾರೆ. ಚಿಕಿತ್ಸೆ ನಡೆಸಿದ ವೈದ್ಯರು ಪ್ರೇಡರ್ ವಿಲ್ಲಿ ಸಿಂಡ್ರೋಮಾ ಇರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರೇಡರ್ ವಿಲ್ಲಿ ಸಿಂಡ್ರೋಮಾದಲ್ಲಿ ಮಕ್ಕಳಿಗೆ ಹಸಿವು ಹೆಚ್ಚಿರುತ್ತದೆ. ಆದ್ರೆ ಲೂಯಿಸ್ ತಿನ್ನುವುದು ಕಡಿಮೆ ಎಂದು ಪಾಲಕರು ಹೇಳಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಹಾರ್ಮೋನ್ ಸಮಸ್ಯೆಯಿಂದ ಹೀಗಾಗ್ತಿದೆ ಎಂದಿದ್ದಾರೆ.

ಬಾಲಕನ ಚಿಕಿತ್ಸೆಗೆ 36 ಸಾವಿರ ರೂಪಾಯಿ ಅಗತ್ಯವಿದೆಯಂತೆ. ಆದ್ರೆ ಬಾಲಕನ ತಂದೆ ತಿಂಗಳ ಸಂಬಳ 13 ಸಾವಿರ. ಹಾಗಾಗಿ ಫೇಸ್ಬುಕ್ ಪೇಜ್ ಶುರು ಮಾಡಿರುವ ಪಾಲಕರು ಹಣದ ಸಹಾಯ ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...