alex Certify
ಕನ್ನಡ ದುನಿಯಾ       Mobile App
       

Kannada Duniya

ಬಿದಿರಿಗೆ ಮಗುವನ್ನು ಕಟ್ಟಿ ಸ್ಮಶಾನದಲ್ಲಿ ಬಿಟ್ಟ ತಂದೆ

ad235808351father-ties-cryi

ಮುಗ್ಧ ಮಗುವನ್ನು ಸ್ಮಶಾನದಲ್ಲಿ ಬಿಟ್ಟು ಹೋದ ಘಟನೆಯೊಂದು ಬೀಜಿಂಗ್ ನಲ್ಲಿ ನಡೆದಿದೆ. ತಂದೆಯೇ ಮಗುವನ್ನು ಸ್ಮಶಾನದಲ್ಲಿ ಬಿಟ್ಟು ಹೋಗಿದ್ದಾನೆ. ಎರಡು ವರ್ಷದ ಹೆಣ್ಣು ಮಗುವನ್ನು ಬಿದಿರಿಗೆ ಕಟ್ಟಿ ಬಿಟ್ಟು ಹೋಗಿದ್ದಾನೆ.

ಸಿಚುವಾನ್ ಬಳಿಯ ಸ್ಮಶಾನದಲ್ಲಿ ಈ ಘಟನೆ ನಡೆದಿದೆ. ಮಗುವಿನ ತಂದೆ-ತಾಯಿ ವಿಚ್ಛೇದನ ಪಡೆದಿದ್ದಾರೆ. ಮಗು ತಂದೆ ಬಳಿ ಇತ್ತು ಎನ್ನಲಾಗಿದೆ. ಆಕೆಯ ಅಳು ಸಹಿಸಲಾಗದೆ ತಂದೆ ಈ ರೀತಿ ಮಾಡಿದ್ದಾನೆ. ಮಗುವಿನ ಹಿಂಭಾಗದಲ್ಲಿ ತಾಯಿ ಹಾಗೂ ಮಗುವಿನ ಹೆಸರು ಬರೆದು ಹೋಗಿದ್ದಾನೆ.

ಚಳಿಗೆ ನಡುಗುತ್ತಿದ್ದ ಮಗು ಒಂದೇ ಸಮನೆ ಅಳ್ತಾ ಇತ್ತು ಎನ್ನಲಾಗಿದೆ. ಮಗು ಅಳುವ ಧ್ವನಿ ಕೇಳಿ ಸ್ಥಳೀಯರು ಅಲ್ಲಿಗೆ ಬಂದಿದ್ದಾರೆ. ಮಗುವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮಗು ತಾಯಿಯ ಮಡಿಲು ಸೇರಿದೆ. ತಂದೆ ಎಲ್ಲಿದ್ದಾನೆಂಬುದು ತಿಳಿದುಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...