alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಟಪದಲ್ಲೇ ಮಗನ ಪತ್ನಿಯೊಂದಿಗೆ ಮಾವನಿಂದ ಮಾನಗೇಡಿ ಕೃತ್ಯ

ಬೀಜಿಂಗ್: ಚೀನಾದಲ್ಲಿ ಆಘಾತಕಾರಿ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಮಾವನೇ ಮಗನ ಪತ್ನಿಗೆ ಚುಂಬಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

ಜಿಯಾಂಗ್ಸು ಪ್ರಾಂತ್ಯದಲ್ಲಿ ನಡೆದ ಮದುವೆಯ ಔತಣಕೂಟದಲ್ಲಿ ಸಾಂಪ್ರದಾಯಿಕ ಚೀನಿ ಮದುವೆ ಉಡುಪಿನಲ್ಲಿ ಆಗಮಿಸಿದ ವಧುವನ್ನು ವೇದಿಕೆಗೆ ಕರೆದುಕೊಂಡು ಬಂದ ಮಾವ ಆಕೆಗೆ ಮುತ್ತಿಟ್ಟಿದ್ದಾನೆ.

ಮದ್ಯದ ಅಮಲಿನಲ್ಲಿ ಹೀಗೆ ಮಾನಗೇಡಿ ಕೃತ್ಯವೆಸಗಿದ್ದಾನೆ. ಎಲ್ಲರೆದುರಲ್ಲೇ ಸೊಸೆಯನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟಿದ್ದಾನೆ. ಅಲ್ಲಿದ್ದವರು ಜೋರಾಗಿ ಕೂಗಾಡಿ ಶಿಳ್ಳೆ ಚಪ್ಪಾಳೆಯೊಂದಿಗೆ ಆಶ್ಚರ್ಯದಿಂದ ಇದನ್ನು ನೋಡಿದ್ದಾರೆ.

ಸೊಸೆಗೆ ಮಾವ ಚುಂಬಿಸಿದ್ದನ್ನು ಕಂಡ ಆಕೆಯ ಕುಟುಂಬದವರು ಗಲಾಟೆ ನಡೆಸಿದ್ದಾರೆ. ನಂತರ ಪಂಚಾಯಿತಿ ನಡೆಸಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...