alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ನಗ್ನ ಚಿತ್ರ ನೋಡಲು ಅಪ್ಪ ಮಾಡಿದ್ದೇನು..?

Social-Media-Graphic18

ನ್ಯೂಯಾರ್ಕ್: ವಿಕೃತ ಕಾಮಿಗಳು ಹೇಗೆಲ್ಲಾ ಇರುತ್ತಾರೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಇಲ್ಲೊಬ್ಬ ತಂದೆ ತನ್ನ ಮಗಳ ನಗ್ನ ಚಿತ್ರ ವೀಕ್ಷಿಸಲು ಏನು ಆಟವಾಡಿದ್ದಾನೆ ನೋಡಿ. ಅಮೆರಿಕಾದ 41 ವರ್ಷ ವಯಸ್ಸಿನ ಈ ಕಾಮುಕ, ನಗ್ನ ಚಿತ್ರ ತೋರಿಸಲು ಮಗಳಿಗೆ ಇನ್ನಿಲ್ಲದಂತೆ ಕಾಡಿದ್ದಾನೆ.

ಹರೆಯಕ್ಕೆ ಬಂದ ಮಗಳ ಮೇಲೆಯೇ ಕಣ್ಣು ಹಾಕಿದ ವಿಕೃತಕಾಮಿ, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಠಿಸಿದ್ದಾನೆ. 2013ರಲ್ಲಿ 16 ವರ್ಷದ ಬಾಲಕನಂತೆ ನಕಲಿ ಖಾತೆ ತೆರೆದಿದ್ದ ಈತ ಅದರ ಮೂಲಕ ತನ್ನ ಮಗಳನ್ನೇ ಫ್ರೆಂಡ್ ಮಾಡಿಕೊಂಡು ನಗ್ನ ಚಿತ್ರ ಕಳಿಸುವಂತೆ ದುಂಬಾಲು ಬಿದ್ದಿದ್ದು, ಮೊದಲಿಗೆ ಆಕೆ ನಿರಾಕರಿಸಿದ್ದಾಳೆ. ಕೊನೆಗೆ ಈತನ ಕಾಟ ತಾಳದೇ, ಒಂದೆರಡು ಚಿತ್ರಗಳನ್ನು ಕಳುಹಿಸಿದ್ದಾಳೆ. ಇನ್ನಷ್ಟು ನಗ್ನ ಚಿತ್ರ ಕಳಿಸಬೇಕು. ಇಲ್ಲದಿದ್ದರೆ, ನಿನ್ನ ಅಪ್ಪನಿಗೆ ತಿಳಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ.

ಅಲ್ಲದೇ, ಚಾಟ್ ನಲ್ಲಿ ಸೆಕ್ಸ್ ಬಗ್ಗೆ ಮಾತನಾಡಿದ್ದ ಈತನ ವರ್ತನೆಯಿಂದ ಬೇಸತ್ತು ಮಗಳು, ದೂರವಾಗಿದ್ದಾಳೆ. ನಂತರ ಬಾಯ್ ಫ್ರೆಂಡ್ ಸತ್ತು ಹೋಗಿದ್ದಾನೆಂದು ಆತನ ಅಮ್ಮನ ಹೆಸರಿನಲ್ಲಿ ಫ್ರೆಂಡ್ ಮಾಡಿಕೊಂಡು, ಮತ್ತೆ ಕಾಡಲು ಆರಂಭಿಸುತ್ತಾನೆ. ಅಪ್ಪನೇ ಹೀಗೆಲ್ಲಾ ಮಾಡುತ್ತಿದ್ದಾನೆ ಎಂಬುದನ್ನು ತಿಳಿಯದ ಆಕೆ, ಶಾಲೆಯಲ್ಲಿ ಸ್ನೇಹಿತರಿಗೆ ವಿಷಯ ತಿಳಿಸುತ್ತಾಳೆ. ಪ್ರಕರಣ ಪೊಲೀಸರ ಗಮನಕ್ಕೆ ಬಂದು ತನಿಖೆ ನಡೆಸಿ, ಆರೋಪಿ ಕಾಮುಕ ಅಪ್ಪನನ್ನು ಬಂಧಿಸಿದ್ದಾರೆ. ಕೋರ್ಟ್ ನಲ್ಲಿ ವಿಚಾರಣೆ ನಡೆದು ಈತ ತಪ್ಪಿತಸ್ಥ ಎಂದು ಸಾಬೀತಾಗಿದೆ ಎಂದು ಹೇಳಲಾಗಿದೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...