alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಜೀವ ತೆಗೆದಿದೆ ಆಸ್ಪತ್ರೆ ಸಿಬ್ಬಂದಿ ಮಾಡಿದ ಪ್ರಮಾದ

ವೈದ್ಯರು ಮಾಡುವ ಒಂದು ಸಣ್ಣ ತಪ್ಪು ಕೂಡ ರೋಗಿಯ ಪ್ರಾಣಕ್ಕೇ ಅಪಾಯ ತರಬಹುದು. ರಷ್ಯಾದಲ್ಲಿ ಸಣ್ಣದೊಂದು ಶಸ್ತ್ರಚಿಕಿತ್ಸೆಗಾಗಿ ಬಂದಿದ್ದ ಮಹಿಳೆ, ಆಸ್ಪತ್ರೆ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ಜೀವ ಕಳೆದುಕೊಂಡಿದ್ದಾಳೆ.

ಎಕಟೆರಿನಾ ಫೆಡ್ಯೇವಾ ಎಂಬ 27 ವರ್ಷದ ಮಹಿಳೆ ರಷ್ಯಾದ ಉಲಿಯಾನೋವ್ಸ್ಕ್ ಎಂಬ ಆಸ್ಪತ್ರೆಗೆ ಬಂದಿದ್ಲು. ಸರ್ಜರಿ ವೇಳೆ ಆಸ್ಪತ್ರೆ ಸಿಬ್ಬಂದಿ ಆಕೆಗೆ ಫಾರ್ಮಾಲಿನ್ ಡ್ರಿಪ್ ಹಾಕಿದ್ದಾರೆ. ಶವ ಕೊಳೆತು ಹೋಗದಂತೆ ತಡೆಯುವ ಔಷಧ ಇದು. ಸಿಬ್ಬಂದಿಗೆ ತಾವು ಮಾಡಿದ ತಪ್ಪಿನ ಅರಿವಾಗುವಷ್ಟರಲ್ಲಿ ತಡವಾಗಿಬಿಟ್ಟಿತ್ತು.

2 ನಿಮಿಷಗಳ ಬಳಿಕ ತಪ್ಪಿನ ಅರಿವಾಗಿ ಸಿಬ್ಬಂದಿ ಫಾರ್ಮಾಲಿನ್ ಡ್ರಿಪ್ ಅನ್ನು ತೆಗೆದಿದ್ದಾರೆ. ಆದ್ರೆ ಅಷ್ಟರಲ್ಲಿ ಫಾರ್ಮಾಲಿನ್ ಮಹಿಳೆಯ ದೇಹ ಪ್ರವೇಶಿಸಿತ್ತು. ಕೆಲವೇ ನಿಮಿಷಗಳಲ್ಲಿ ಆಕೆ ಮೃತಪಟ್ಟಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ಮಗಳನ್ನು ಹತ್ಯೆ ಮಾಡಿದ್ದಾರೆ ಅಂತಾ ಆಕೆಯ ತಾಯಿ ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...