alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೆಲ್ ಟವರ್ ನಲ್ಲಿ ಫ್ಯಾಷನ್ ಶೋ..!

Top of the world! Now, a fashion show on the Eiffel Tower

ಜಗದ್ವಿಖ್ಯಾತ ಐಫೆಲ್ ಟವರ್ ನಲ್ಲಿ ಮೊದಲ ಬಾರಿಗೆ ಫ್ಯಾಷನ್ ಶೋ ನಡೆಯಲಿದೆ. ಟವರ್ ನ ಮೊದಲ ಹಂತದಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿದೆ. ‘ಫ್ರೆಂಚ್- ಯುರೋಪಿಯನ್- ಇಂಡಿಯನ್ ಫ್ಯಾಷನ್ ವೀಕ್’ ಹೆಸರಿನಲ್ಲಿ ಮೂರು ದಿನಗಳ ಕಾಲ ಈ ಫ್ಯಾಷನ್ ಶೋ ನಡೆಸಲಾಗುವುದು.

ಮೂರು ದಿನಗಳ ಕಾಲ ನಡೆಯುವ ಈ ಫ್ಯಾಷನ್ ಶೋ ಅಕ್ಟೋಬರ್ 21 ರಿಂದ ಆರಂಭವಾಗಲಿದೆ ಎಂದು ಫ್ರೆಂಚ್ ಯುರೋಪಿಯನ್ ಇಂಡಿಯನ್ ಸಂಘಟನೆಯ ಅಧ್ಯಕ್ಷ ಸತೀಶ್ ರೆಡ್ಡಿ ಹೇಳಿದ್ದಾರೆ. ಫ್ಯಾಷನ್ ಶೋವನ್ನು ಇನ್ನಷ್ಟು ಪ್ರಖ್ಯಾತಗೊಳಿಸಲು ಜಗತ್ತಿನ 7 ಅದ್ಭುತ ಸ್ಥಳಗಳಲ್ಲಿ ಶೋ ನಡೆಸುವ ವಿಚಾರ ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ಪ್ಯಾರಿಸ್ ನಲ್ಲಿರುವ ಫ್ರೆಂಚ್ ಯುರೋಪಿಯನ್ ಇಂಡಿಯನ್ ಸಂಘಟನೆಯೊಂದಿಗೆ ಇನ್ನೂ ಹಲವರು ಕೈಜೋಡಿಸಿರುವುದು ತುಂಬ ಸಂತಸದ ವಿಷಯ. ಇದು ಅನೇಕ ಫ್ಯಾಷನ್ ಡಿಸೈನರ್ ಗಳು ಒಂದೆಡೆ ಸೇರುವ ಬೃಹತ್ ವೇದಿಕೆಯಾಗಲಿದೆ. ಈ ಫ್ಯಾಷನ್ ಶೋ ಮೂರು ದೇಶಗಳ ನಡುವಿನ ಶಾಂತಿ, ಸಾಮರಸ್ಯಗಳನ್ನು ಹೆಚ್ಚಿಸಲಿದೆ ಎಂದು ರೆಡ್ಡಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...