alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯಲ್ ಲೈಫ್ ನಲ್ಲಿ ಒಂದಾಗಿದೆ ತೆರೆ ಮೇಲಿನ ಬ್ರೇಕಪ್ ಜೋಡಿ

ಎಚ್ಬಿಓ ವಾಹಿನಿಯ ಜನಪ್ರಿಯ ಸಿರೀಸ್ ‘ಗೇಮ್ ಆಫ್ ಥ್ರೋನ್ಸ್’ ನಲ್ಲಿ ತೆರೆ ಮೇಲೆ ಬ್ರೇಕ್ ಅಪ್ ಆದ ಜೋಡಿ ರಿಯಲ್ ಲೈಫ್ ನಲ್ಲಿ ಒಂದಾಗಿದೆ. ಹೌದು ಗೇಮ್ ಆಫ್ ಥ್ರೋನ್ಸ್ ಸಿರೀಸ್ ನ ಕಿಟ್ ಹ್ಯಾರಿಂಗ್ಟನ್ ಮತ್ತು ರೋಸ್ ಲೆಸ್ಲೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಕಾಟ್ಕಾಂಡ್ಲ್ ನ ಚರ್ಚ್ ಒಂದರಲ್ಲಿ ಈ ಸೆಲೆಬ್ರಿಟಿ ಕಪಲ್ಸ್ ಉಂಗುರ ಬದಲಿಸಿಕೊಂಡಿದ್ದಾರೆ.

ಗೇಮ್ ಆಫ್ ಥ್ರೋನ್ಸ್ ಸಿರೀಸ್ ನಲ್ಲಿ ಇತ್ತೀಚೆಗಷ್ಟೇ ಇಬ್ಬರ ಲವ್ ಅಫೇರ್ಗೆ ಬ್ರೇಕ್ ಬಿದ್ದಿತ್ತು. ವೀಕ್ಷಕರು ಕೂಡ ಇವರಿಬ್ಬರನ್ನ ಇನ್ಮುಂದೆ ಆನ್ ಸ್ಕ್ರೀನ್ ನಲ್ಲಿ ಮಿಸ್ ಮಾಡಿಕೊಳ್ಳಬೇಕಲ್ಲ ಅಂತ ಕೊಂಚ ಬೇಸರ ಮಾಡಿಕೊಂಡಿದ್ದರು. ಅಷ್ಟರಲ್ಲೇ ಕಿಟ್ ಹ್ಯಾರಿಂಗ್ಟನ್ -ರೋಸ್ ಲೆಸ್ಲೆ ಆಫ್ ಸ್ಕ್ರೀನ್ನಲ್ಲಿ ಒಂದಾಗಿದ್ದಾರೆ.

ಮದುವೆ ಸಮಾರಂಭದಲ್ಲಿ ಫೋಟೋಗೆ ಸಖತ್ ಫೋಸ್ ನೀಡಿರೋ ಕಪಲ್ಸ್ ಈ ಮೂಲಕ ಅಭಿಮಾನಿಗಳಲ್ಲಿದ್ದ ಬೇಸರ ಹೋಗಲಾಡಿಸಿದ್ದಾರೆ. ಮದುವೆಯ ಫೋಟೋ ಈಗ ಟ್ವಿಟ್ಟರ್ ನಲ್ಲಿ ಹರಿದಾಡ್ತಿವೆ. ಇಬ್ಬರ ಅಭಿಮಾನಿಗಳು ಖುಷಿಯಿಂಂದ ಆ ಫೋಟೋಗಳನ್ನು ಶೇರ್ ಮಾಡ್ತಾ ಹೊಸ ಜೋಡಿಗೆ ಕಂಗ್ರ್ಯಾಟ್ಸ್ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...