alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಮಾಲೀಕರಿಗೆ ತಲೆನೋವು ತಂದಿಟ್ಟಿದೆ ಈ ಶ್ವಾನ

huckleberryಟೆಕ್ಸಾನ್ ನ ಆಸ್ಟಿನ್ ನಲ್ಲಿ ಸದಾ ಕಾಲ ಮನೆ ಮೇಲೆ ಏರಿ ಕುಳಿತುಕೊಳ್ಳುವ ಶ್ವಾನವೊಂದು ಅದರ ಮಾಲೀಕರಿಗೆ ತಲೆ ನೋವು ತಂದಿಟ್ಟಿದೆ. ಈ ಶ್ವಾನ ಮನೆ ಮೇಲೆ ಕುಳಿತುಕೊಂಡಿರುವುದನ್ನು ಕಂಡವರು ಸದಾ ಮನೆ ಮಾಲೀಕರ ಕದ ತಟ್ಟಿ ಎಚ್ಚರಿಸುತ್ತಿದ್ದಾರಂತೆ.

ಆದರೆ ಏನೇ ಮಾಡಿದರೂ ತನ್ನ ಬುದ್ದಿ ಬಿಡದ ಈ ಶ್ವಾನ ಮನೆ ಮೇಲೇರುವುದನ್ನು ಮಾತ್ರ ನಿಲ್ಲಿಸಿಲ್ಲ. ಆದರೆ ಇದನ್ನು ಕಂಡವರು ಮಾಲೀಕರ ಮನೆಯ ಬಾಗಿಲು ಬಡಿಯುವುದು ಮಾತ್ರ ತಪ್ಪಿಲ್ಲ. ಹೀಗಾಗಿ ಈ ಕಾಟದಿಂದ ತಪ್ಪಿಸಿಕೊಳ್ಳಲು ಮನೆ ಮಾಲೀಕರು ತಂತ್ರವೊಂದನ್ನು ಮಾಡಿದ್ದಾರೆ.

ತಮ್ಮ ಮನೆ ಬಾಗಿಲ ಮುಂದೆ ನೋಟೀಸ್ ಅಂಟಿಸಿರುವ ನಾಯಿ ಮಾಲೀಕರು. ಅದಕ್ಕೆ ಯಾವುದೇ ಅಪಾಯವಾಗುವುದಿಲ್ಲ. ಅದು ಈ ಅಭ್ಯಾಸ ರೂಢಿಸಿಕೊಂಡಿದ್ದು, ನಾವಾಗಿ ಇದನ್ನು ಕಲಿಸಿಲ್ಲವೆಂದು ಹೇಳಿದ್ದಾರೆ. ನಾಯಿ ಮನೆ ಮೇಲಿರುವುದನ್ನು ಕಂಡು ಇದನ್ನು ತಿಳಿಸಲು ಪದೇ ಪದೇ ನಮ್ಮ ಮನೆ ಬಾಗಿಲು ಬಡಿಯಬೇಡಿ ಎಂದಿರುವ ಈ ಕುಟುಂಬ, ಇದರ ಫೋಟೋ ತೆಗೆದುಕೊಂಡು ಹಂಚಿಕೊಳ್ಳಿ ಎಂಬ ಸಲಹೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...