alex Certify
ಕನ್ನಡ ದುನಿಯಾ       Mobile App
       

Kannada Duniya

7 ತಿಂಗಳ ಮಗುವನ್ನೇ ಕೊಂದಿದೆ ಮುದ್ದಾಗಿ ಸಾಕಿದ್ದ ನಾಯಿ

ಮನೆಯಲ್ಲಿ ಮುದ್ದಾಗಿ ಸಾಕಿದ್ದ ನಾಯಿಯೊಂದು 7 ತಿಂಗಳ ಗಂಡು ಮಗುವನ್ನೇ ಕೊಂದು ಹಾಕಿದೆ. ಜರ್ಮನಿಯ ಬ್ಯಾಡ್ ಕೋಯಿಂಗ್ ಎಂಬಲ್ಲಿ ನಡೆದ ಘಟನೆ ಇದು. ಮಗುವಿನ ತಲೆಗೆ ನಾಯಿ ಕಚ್ಚಿದ್ದರಿಂದ ಅದು ಮೃತಪಟ್ಟಿದೆ.

ಮನೆಯಲ್ಲಿ ಮಲಗಿದ್ದ ಮಗುವಿನ ಮೇಲೆ ನಾಯಿ ದಿಢೀರ್ ದಾಳಿ ಮಾಡಿದೆ. ಕಚ್ಚಿ ಗಾಯಗೊಳಿಸಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ರು.

ಆದ್ರೆ ಕೆಲವು ಗಂಟೆಗಳ ಬಳಿಕ ಮಗು ಮೃತಪಟ್ಟಿದೆ. ಈ ಘಟನೆಯಿಂದ ಮಗುವಿನ ಹೆತ್ತವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಾಯಿಯನ್ನು ಪ್ರಾಣಿ ರಕ್ಷಣಾ ಘಟಕಕ್ಕೆ ಕಳಿಸಲಾಗಿದೆ. ಕಳೆದ ಒಂದು ವಾರದಲ್ಲಿ ಜರ್ಮನಿಯಲ್ಲಿ ನಾಯಿ ದಾಳಿಗೆ ಮೂವರು ಬಲಿಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...