alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡೋಕೆ ಅವೆಲ್ಲವೂ ಫಿಫಾ ಕಪ್ ರೆಪ್ಲಿಕಾ, ಆದ್ರೆ ಒಳಗಿದ್ದದೇನು ಗೊತ್ತಾ?

ಕಳ್ಳರು ಚಾಪೆ ಕೆಳಗೆ ತೂರಿದ್ರೆ ಪೊಲೀಸರು ರಂಗೋಲಿ ಕೆಳೆಗೆ ತೂರ್ತಾರೆ ಅನ್ನೋದು ಇದಕ್ಕೆ ನೋಡಿ. ಅರ್ಜೆಂಟೈನಾ ಪೊಲೀಸರು ಮಾದಕ ವಸ್ತುಗಳನ್ನ ಸರಬರಾಜು ಮಾಡ್ತಿದ್ದ ಭಾರೀ ಜಾಲವೊಂದನ್ನ ಬೇಧಿಸಿದ್ದಾರೆ. ನಾರ್ಕೋಸ್ ಡೆ ಲೇ ಕೋಪಾ ಅನ್ನೋ ಡ್ರಗ್ಸ್ ದಂಧೆಯ ಗ್ಯಾಂಗ್ ಬಂಧಿಸಿ ಜೈಲಿಗಟ್ಟಿದ್ದಾರೆ.

ಡ್ರಗ್ಸ್ ಸರಬರಾಜು ಮಾಡೋಕೆ ಖದೀಮರು ಮಾಡಿದ್ದ ಐಡಿಯಾ ಒಂದು ಕ್ಷಣ ಪೊಲೀಸರಿಗೂ ಶಾಕ್ ಕೊಟ್ಟಿತ್ತು. ಯಾಕೆ ಗೊತ್ತಾ…? ಮಾದಕ ವಸ್ತುಗಳನ್ನ ಸರಬರಾಜು ಮಾಡೋದಕ್ಕೆ ಇವರು ಫಿಫಾ ವಿಶ್ವಕಪ್ ಟ್ರೋಫಿಗಳ ಮಾದರಿಯನ್ನ ಬಳಸಿಕೊಳ್ತಿದ್ರು.

ಈ ಸ್ಮಾರ್ಟ್ ಡ್ರಗ್ ದಂಧೆಯನ್ನ ಬಯಲಿಗೆಳೆದಿರುವ ಪೊಲೀಸರು ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರನ್ನ ಬಂಧಿಸಿದ್ದಾರೆ. ಬಂಧಿತರಿಂದ 10 ಕೆಜಿ ಕೊಕೇನ್, 20 ಕೆಜಿ ಮಾರಿಜುವಾನಾ , ಮತ್ತು 1800 ಡೋಸ್ ಗಳಷ್ಟು ಕೊಕೇಯ್ನ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಮತ್ತೊಂದು ಭಾಗಕ್ಕೆ ಸಂಬಂಧಿಸಿದಂತೆ ಕೊಲಂಬಿಯಾ ಪೊಲೀಸರು 14 ಟೀಮ್ ಜೆರ್ಸಿಗಳನ್ನ ವಶಪಡಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...