alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಸಂಸ್ಥಾಪಕನ ಹೆಸರಿನಲ್ಲೇ ಹರಿದಾಡಿದೆ ಸುಳ್ಳು ಸುದ್ದಿ

ಪಾಕಿಸ್ತಾನದಲ್ಲಿ ಡ್ಯಾಮ್ ನಿರ್ಮಾಣ ಮಾಡುವ ಕನಸು ಪ್ರಧಾನಿ ಇಮ್ರಾನ್ ಖಾನ್ ಅವರದ್ದಾಗಿದೆ. ಅದ್ರಂತೆ ವಿದೇಶದಲ್ಲಿ ನೆಲೆಸಿರುವ ಪಾಕ್ ಪ್ರಜೆಗಳಿಗೆ ಡ್ಯಾಮ್ ನಿರ್ಮಿಸಲು ಹಣ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಜೊತೆಗೆ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಡ್ಯಾಮ್ ಕಟ್ಟಲು 5 ಮಿಲಿಯನ್ ಯು.ಎಸ್. ಡಾಲರ್ ನೀಡುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪಾಕಿಸ್ತಾನ ಪ್ರಧಾನಿ ಡ್ಯಾಮ್ ಕಟ್ಟಲು ಹಣ ಕೇಳಿದ ಎರಡೇ ದಿನಗಳಲ್ಲಿ ಟ್ವಿಟರ್ ನಲ್ಲಿ, ಪಾಕ್ ಸರ್ಕಾರ ಹಮ್ಮಿಕೊಂಡಿರುವ ಡ್ಯಾಮ್ ನಿರ್ಮಾಣದ ಕನಸಿಗೆ ನಾವು ಕೈ ಜೊಡಿಸುತ್ತೇವೆ. ಅಲ್ಲದೆ ಪ್ರಧಾನಿ ಡ್ಯಾಮ್ ನಿರ್ಮಾಣ ನಿಧಿಗೆ 5 ಮಿಲಿಯನ್ ಡಾಲರ್ ನೀಡುವುದಾಗಿ ಫೇಸ್ ಬುಕ್ ಸಂಸ್ಥಾಪಕ ತಿಳಿಸಿದ್ದಾರೆ. ಸದ್ಯದಲ್ಲಿಯೇ ಪಾಕ್ ಗೆ ಭೇಟಿ ನೀಡುವ ಇರಾದೆಯನ್ನು ಸಹ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಡಿತ್ತು.

ಈ ಟ್ವೀಟ್ ಹಿಂದಿನ ಸತ್ಯ ಬಯಲಾಗಿದೆ. ಫೇಸ್ ಬುಕ್ ಸಂಸ್ಥಾಪಕರ ಹೆಸರಲ್ಲಿ ನಕಲಿ ಖಾತೆ ತೆರೆದು, ವ್ಯಕ್ತಿಯೋರ್ವ ಟ್ವೀಟ್ ಮಾಡಿದ್ದು ಬಹಿರಂಗವಾಗಿದೆ. ಟ್ವಿಟರ್ ನಲ್ಲಿ ನಕಲಿ ಖಾತೆ ಓಪನ್ ಮಾಡಿ ಸುಳ್ಳು ಸುದ್ದಿ ಹಬ್ಬಿಸುವುದು ಇದು ಮೊದಲೇನಲ್ಲ. ಈ ಹಿಂದೆಯೂ ಇಂತಹದ್ದೇ ಪ್ರಕರಣಗಳು ಬಯಲಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...