alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮನ್ನು ಬೆರಗಾಗಿಸುತ್ತೆ ಈ ಸಿಂಡ್ರೆಲ್ಲಾ ಮದುವೆ…!

ಮದುವೆ ಅನ್ನೋದು ವರ್ಷ ವರ್ಷ ಬರೋದಿಲ್ವಲ್ಲಾ, ಜೀವಮಾನದಲ್ಲಿ ಒಮ್ಮೆ ತಾನೇ ಬರೋದು? ಹಾಗಾಗಿ ಭರ್ಜರಿಯಾಗಿ ಆಗಬೇಕು, ವಿಭಿನ್ನವಾಗಿ ನಡೆಯಬೇಕು ಎಂದೆಲ್ಲಾ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸಿರುತ್ತದೆ. ಅಷ್ಟಾದರೂ ಮದುವೆಯ ದಿನ ಅದನ್ನು ಸಾಕಾರಗೊಳಿಸಲು ಸಾಧ್ಯವಾಗುವುದು ಕೆಲವೇ ಮಂದಿಗೆ ಮಾತ್ರ.

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನ ಎಮಿಲಿ ಬ್ರೇಡನ್‌ ಎಂಬಾಕೆ ಡಿಸ್ನಿಯ ದೊಡ್ಡ ಫ್ಯಾನ್. ಸಿಂಡ್ರೆಲ್ಲಾ ಥೀಮ್‌ನಲ್ಲಿ ಮದುವೆಯಾಗುವ ಬಯಕೆ ಹೊಂದಿದ್ದಳು. ಮಿಕ್ಕಿ ಮೌಸ್ ಕೇಕ್ ಬೇಕು, ತನಗೆ ಬಾಲ್ ಗೌನ್ ಬೇಕು ಎಂದೆಲ್ಲಾ ಕನಸು ಕಟ್ಟಿಕೊಂಡಿದ್ದಳು. ಅದನ್ನು ಮದುವೆ ದಿನ ಸಾಕಾರಗೊಳಿಸಿದಳು ಕೂಡಾ.

ತನ್ನ ಭಾವಿ ಪತಿ ಜಾಕ್‌ಗೆ ತನ್ನ ಕನಸಿನ ಬಗ್ಗೆ ಹೇಳಿ ಆತನ ಮನವೊಲಿಸಿದಳು. ಪ್ರಿನ್ಸಿ ಚಾರ್ಮಿಂಗ್ ರೀತಿ ಆತನಿಗೂ ಉಡುಗೆ ತೊಡಿಸಿದಳು. ತಾನು ಸಿಂಡ್ರೆಲಾಳ ರೀತಿ ಅಲಂಕೃತಗೊಂಡಳು. ಈ ಡಿಸ್ನಿ ಕಥೆ ನವ ವಧುವರರಿಗಷ್ಟೇ ಮೀಸಲಾಗಿರಲಿಲ್ಲ. ಮನೆಯವರು, ಅತಿಥಿಗಳೂ ಡಿಸ್ನಿಯ ಉಡುಗೆ ತೊಡುಗೆ ಧರಿಸಿದ್ದರು. ಒಬ್ಬೊಬ್ಬರಿಗೆ ಒಂದು ಪಾತ್ರದ ಥೀಮ್‌ನಲ್ಲಿ ಉಡುಗೆ ನೀಡಲಾಗಿತ್ತು. ಮದುವೆಯಲ್ಲಿ ಪಾಲ್ಗೊಂಡ ಎಲ್ಲಾ 64 ಮಂದಿಯೂ ಡಿಸ್ನಿ ಪಾತ್ರಗಳ ವೇಷ ಧರಿಸಿಕೊಂಡಿದ್ದರು.

“ನಾನು ಬಾಲ್ಯದಿಂದ ಸಿಕ್ಕಾಪಟ್ಟೆ ಡಿಸ್ನಿ ಸಿನಿಮಾ ನೋಡಿ ಬೆಳೆದವಳು. ಅದರ ಎಲ್ಲಾ ಮ್ಯಾಜಿಕ್ ನನ್ನ ಮನ ಸೆಳೆದಿತ್ತು. ಸಿಂಡ್ರೆಲ್ಲಾ ನನ್ನ ಫೇವರಿಟ್. ನನ್ನ ಮದುವೆಯ ದಿನ ಅದನ್ನು ನನಸಾಗಿಸಿಕೊಂಡೆ” ಎನ್ನುತ್ತಾಳೆ ಎಮಿಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...