alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾ ಹಾಲ್ ನಲ್ಲಿ ಕಳೆಯಲಾಗುತ್ತೆ ಸಾಲ ತೀರಿಸದವರ ಮಾನ

ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ‘ಕೊಟ್ಟವನು ಕೋಡಂಗಿ ಇಸ್ಕೊಂಡವನು ವೀರಭದ್ರ’ ಎಂಬ ಮಾತಿದೆ ಇದಕ್ಕೆ ಕಾರಣ, ಬಹಳಷ್ಟು ಮಂದಿ ಪಡೆದ ಸಾಲವನ್ನು ಹಿಂದಿರುಗಿಸದೆ ಕೈ ಎತ್ತುವುದು ಜಾಸ್ತಿ.

ಇಂಥವರಿಗೆ ಸಾಲ ಕೊಟ್ಟವರು ಅದನ್ನು ವಾಪಸ್ ಪಡೆಯುವರಷ್ಟರಲ್ಲಿ ಹೈರಾಣಾಗಿರುತ್ತಾರೆ. ಒಮ್ಮೊಮ್ಮೆ ಹಣ ಪಡೆಯುವ ಸಲುವಾಗಿ ನ್ಯಾಯಾಲಯದ ಮೆಟ್ಟಿಲನ್ನೂ ಏರಬೇಕಾಗುತ್ತದೆ. ಅದೆಲ್ಲ ಇರಲಿ, ಚೀನಾದ ಈ ಪ್ರಾಂತ್ಯದಲ್ಲಿ ಸಾಲ ವಸೂಲಿಗೆ ವಿಭಿನ್ನ ವಿಧಾನವನ್ನು ಅನುಸರಿಸಲಾಗುತ್ತಿದೆ.

ಚೀನಾದ ಹಿಜಾಂಗ್ ಪ್ರಾಂತ್ಯದಲ್ಲಿ, ಸಾಲ ಪಡೆದವನು ಅದನ್ನು ಸಕಾಲಕ್ಕೆ ಹಿಂದಿರುಗಿಸದಿದ್ದರೆ ನ್ಯಾಯಾಲಯದ ಆದೇಶದಂತೆ ಚಿತ್ರಮಂದಿರಗಳಲ್ಲಿ ಅಂತವರ ಹೆಸರುಗಳನ್ನು ಪ್ರದರ್ಶಿಸಲಾಗುತ್ತದೆ. ಈ ಕ್ರಮಕ್ಕೆ ‘ರೀಲ್ ಆಫ್ ಶೇಮ್’ ಎಂದು ಹೆಸರಿಡಲಾಗಿದ್ದು, ಇದು ಜಾರಿಗೆ ಬಂದ ನಂತರ ಸಾಲ ಪಡೆದ ಹಲವು ಮಂದಿ ಹಿಂದಿರುಗಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...