alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರ್ಡ್ ವೇರ್ ಕ್ಷೇತ್ರಕ್ಕೂ ಕಾಲಿಡಲಿದೆ ಫೇಸ್ ಬುಕ್

ಈವರೆಗೂ ಸಾಫ್ಟ್ ವೇರ್ ಕಂಪನಿಯಾಗಿ ಗುರುತಿಸಿಕೊಂಡಿದ್ದ ಫೇಸ್ ಬುಕ್ ಇದೀಗ ಹಾರ್ಡ್ ವೇರ್ ಕ್ಷೇತ್ರಕ್ಕೂ ಕೈ ಹಾಕಿದೆ.

ಅಮೆಜಾನ್ ಮತ್ತು ಗೂಗಲ್ ಸಂಸ್ಥೆಗಳು ಇಂತಹ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದವು. ಇದೀಗ ಜಗತ್ತಿನ ಅತಿದೊಡ್ಡ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸರದಿ.

ಮೂಲಗಳ ಪ್ರಕಾರ ಫೇಸ್ ಬಕ್ ಮುಂದಿನ ವಾರಾಂತ್ಯದೊಳಗೆ ಅಮೆಜಾನ್ ಇಕೋ ಶೋ ಅನ್ನು ಹೋಲುವಂತಹ ಸ್ಮಾರ್ಟ್ ಹೋಂ ಡಿವೈಸ್ ಅನ್ನು ಬಿಡುಗಡೆಗೊಳಿಸಲಿದೆ. ಅಂದರೆ ಇದು ವಿಡಿಯೋ ಚಾಟಿಂಗ್ ಮಾಡಲು ಸೌಲಭ್ಯವಿರುವ ಸಾಧನವಾಗಿದೆ.

ಇದು ಸಾಮಾಜಿಕ ಜಾಲತಾಣದ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಲಿದೆ ಎಂದು ಹೇಳಲಾಗಿದೆ.

ಎರಡು ಬಗೆಯ ಪೋರ್ಟೆಬಲ್ ಡಿವೈಸ್ ಬಿಡುಗಡೆಯಾಗಲಿದ್ದು ದೊಡ್ಡ ವಿಡಿಯೋ ಸ್ಕ್ರೀನ್ ಇರುವ ಡಿವೈಸ್ ನ ಬೆಲೆ 400 ಯು.ಎಸ್. ಡಾಲರ್(29 ಸಾವಿರ), ಮತ್ತು ಸಣ್ಣ ಸ್ಕ್ರೀನ್ ಇರುವ ಡಿವೈಸ್ ನ ಬೆಲೆ 300 ಯು.ಎಸ್. ಡಾಲರ್(22 ಸಾವಿರ) ಎಂದು ಹೇಳಲಾಗಿದೆ. ಆದರೆ ಸ್ಕ್ರೀನ್ ಅಳತೆ ಎಷ್ಟು ಎಂದು ತಿಳಿದು ಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...