alex Certify
ಕನ್ನಡ ದುನಿಯಾ       Mobile App
       

Kannada Duniya

200 ಅಪ್ಲಿಕೇಶನ್ ಗಳನ್ನು ಫೇಸ್ ಬುಕ್ ತೆಗೆದು ಹಾಕಿದ್ಯಾಕೆ ಗೊತ್ತಾ…?

ಫೇಸ್ ಬುಕ್ ಮೊದಲ ಹಂತದಲ್ಲಿ 200 ಆಪ್ ಗಳನ್ನು ತೆಗೆದು ಹಾಕಿದೆ. ಕಾರಣ ಕೇಂಬ್ರಿಜ್ ಅನಾಲಿಟಿಕಾ ಡೇಟಾ ಕಳವು ಹಗರಣಕ್ಕೆ ಪ್ರತಿಯಾಗಿ, ಅಪ್ಲಿಕೇಶನ್ ಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗ್ತಿದೆ ಎಂಬ ಕಾರಣಕ್ಕೆ 200 ಆ್ಯಪ್ ಗಳನ್ನು ತೆಗೆದುಹಾಕಿದೆ. ಇನ್ನು ಫೇಸ್ ಬುಕ್ ನಿಂದ ತೆಗೆದುಹಾಕಿರುವ ಅಪ್ಲಿಕೇಶನ್ ಗಳ ತನಿಖೆ ಬಾಕಿ ಉಳಿದಿದೆ ಎಂದು ಫೇಸ್ ಬುಕ್ ಉಪಾಧ್ಯಕ್ಷ ಐಮೆ ಅರ್ಚಿಬೊಂಗ್ ತಿಳಿಸಿದ್ದಾರೆ.

2014 ರಲ್ಲಿ ಕಟ್ಟೈಲ್ಡ್ ಡೇಟಾ ಪ್ರವೇಶಕ್ಕೂ ಮುನ್ನ ದೊಡ್ಡ ಪ್ರವೇಶ ಮಾಹಿತಿಯನ್ನು ಹೊಂದಿರುವ ಎಲ್ಲಾ ಅಪ್ಲಿಕೇಶನ್ ಗಳನ್ನು ತನಿಖೆ ಮಾಡಲಾಗುವುದು ಎಂದು ಫೇಸ್ ಬುಕ್ ಸಿಇಒ ತಿಳಿಸಿದ್ರು. ಈ ಹಿನ್ನೆಲೆಯಲ್ಲಿ ಎಲ್ಲಾ ಅಪ್ಲಿಕೇಶನ್ ಗಳನ್ನು ತನಿಖೆ ನಡೆಸಲಾಗ್ತಿದೆ.

ಈ ಮಧ್ಯೆ ಜನರ ಫೇಸ್ ಬುಕ್ ಡೇಟಾವನ್ನು ದುರ್ಬಳಕೆ ಮಾಡಿರುವ ಎಲ್ಲಾ ಅಪ್ಲಿಕೇಶನ್ ಗಳನ್ನು ಕಂಡುಹಿಡಿಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಸಾಧ್ಯವಾದಷ್ಟು ಬೇಗ ಈ ಅಪ್ಲಿಕೇಶನ್ ಗಳನ್ನು ತನಿಖೆ ಮಾಡಲು ಆಂತರಿಕ ಮತ್ತು ಬಾಹ್ಯ ತಜ್ಞರ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಫೇಸ್ ಬುಕ್ ಉಪಾಧ್ಯಕ್ಷ ತಿಳಿಸಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಟ್ರಂಪ್ ಪರವಾಗಿ ಕೇಂಬ್ರಿಡ್ಜ್ ಅನಾಲಿಟಿಕ ಸಂಸ್ಥೆ ಕೆಲಸ ಮಾಡಿತ್ತು. ಅಲ್ಲದೇ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಲಕ್ಷಾಂತರ ಫೇಸ್ ಬುಕ್ ಖಾತೆದಾರರ ಮಾಹಿತಿ ಕದ್ದು ಅದನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...