alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಬಳಕೆದಾರರಿಗೆ ಮತ್ತೊಂದು ಶಾಕ್

ಫೇಸ್ಬುಕ್ ಬಳಕೆದಾರರ ವೈಯಕ್ತಿಕ ವಿವರಗಳನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ತಿದೆ ಎಂಬ ಬಗ್ಗೆ ಒಂದೊಂದೇ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಬಳಕೆದಾರರ ಡೇಟಾ ಸೋರಿಕೆ ಬಗ್ಗೆ ಕೇಂಬ್ರಿಡ್ಜ್ ಎನಲಿಟಿಕಾ ಮೊದಲು ವರದಿ ಮಾಡಿತ್ತು.

ಜಗತ್ತಿನಲ್ಲಿ ಸುಮಾರು 2 ಬಿಲಿಯನ್ ಜನರು ಫೇಸ್ಬುಕ್ ಬಳಕೆ ಮಾಡುತ್ತಿದ್ದಾರೆ. ಫೇಸ್ಬುಕ್ ನ ಮತ್ತೊಂದು ಮೋಸವನ್ನು ನ್ಯೂಜಿಲೆಂಡ್ ನ ಡೈಲನ್ ಮ್ಯಾಕ್ಕೇ ಪತ್ತೆ ಮಾಡಿದ್ದಾರೆ. ಬಳಕೆದಾರರ ಆಂಡ್ರಾಯ್ಡ್ ಮೊಬೈಲ್ ನ ಕರೆಗಳ ವಿವರವನ್ನು ಸಹ ಫೇಸ್ಬುಕ್ ಸಂಗ್ರಹಿಸುತ್ತಿರುವುದನ್ನು ಬಯಲಿಗೆಳೆದಿದ್ದಾರೆ.

ಹೊರಹೋಗುವ ಮತ್ತು ಒಳಬರುವ ಕರೆಗಳ ಸಮಯ, ಹೆಸರು, ಫೋನ್ ನಂಬರ್ ಎಲ್ಲವನ್ನೂ ಫೇಸ್ಬುಕ್ ಕಲೆಕ್ಟ್ ಮಾಡುತ್ತಿತ್ತು. ಬಳಕೆದಾರರ ಎಸ್ ಎಂ ಎಸ್ ಹಾಗೂ ಎಂಎಂಎಸ್ ಡೇಟಾಗಳಿಗೆ ಕೂಡ ಫೇಸ್ಬುಕ್ ಕನ್ನಹಾಕಿರೋದು ಬಹಿರಂಗವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...