alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಗ್ರಾಹಕರ ಮಾಹಿತಿಯನ್ನು ಹಂಚಿದ ಫೇಸ್ಬುಕ್

ತನ್ನ ಬಳಕೆದಾರರ ವಿವರಗಳನ್ನು 52 ಸಂಸ್ಥೆಗಳಿಗೆ ಹಂಚಿಕೆ ಮಾಡಿರುವುದಾಗಿ ಸ್ವತಃ ಫೇಸ್ಬುಕ್ ಹೇಳಿಕೆ ನೀಡಿದೆ. ಈ ಪೈಕಿ ಕೆಲವು ಚೀನಾ ಸಂಸ್ಥೆಗಳೂ ಇದ್ದವು ಎಂದು ತಿಳಿದು ಬಂದಿದೆ.

ಮೊಬೈಲ್ ಫೋನ್ ತಯಾರಿಕಾ ಕಂಪನಿಯ ಜತೆಗೆ ಗ್ರಾಹಕರ ವಿವರಗಳನ್ನು ನೀಡಿರುವುದಾಗಿ ಹೇಳಿಕೆ ನೀಡಿದೆ. ಈ ಕುರಿತು ಯುಎಸ್ ಎನರ್ಜಿ ಮತ್ತು ಕಾಮರ್ಸ್ ಸಮಿತಿಗೆ ನೀಡಿರುವ ವರದಿಯಲ್ಲಿ ಫೇಸ್ಬುಕ್ ಬಳಕೆದಾರರ ಮಾಹಿತಿಯನ್ನು ನೀಡಿರುವುದಾಗಿ ಹೇಳಿದೆ.

ಆಪಲ್, ಅಮೆಜಾನ್, ಬ್ಲಾಕ್ಬರಿ, ಸ್ಯಾಮ್ಸಂಗ್ ಸಂಸ್ಥೆಗಳಿಗೆ ಬಳಕೆದಾರರ ಮಾಹಿತಿ ನೀಡಿರುವುದಾಗಿ ಫೇಸ್ಬುಕ್ ಹೇಳಿದೆ. ಇದಲ್ಲದೆ ಅಲಿಬಾಬಾ, ಕ್ವಾಲ್ಕೋಮ್, ಪಾನ್ಟೆಕ್, ಹ್ಯೂವಾಯಿ, ಲೆನೊವಾ, ಒಪ್ಪೊ, ಟಿಸಿಎಲ್ಗಳಿಗೂ ಮಾಹಿತಿ ಹಂಚಿಕೊಂಡಿರುವುದಾಗಿ ಸಂಸ್ಥೆ ಹೇಳಿದೆ.

ಇತ್ತೀಚೆಗೆ ಬಳಕೆದಾರರ ಮನಸ್ಥಿತಿ ಕುರಿತು ಕೇಂಬ್ರಿಡ್ಜ್ ಅನಲೆಟಿಕಾ ಸಂಸ್ಥೆಯಿಂದ ನಡೆದಿದೆ ಎನ್ನಲಾದ ಹಗರಣದಿಂದ 8.7 ಕೋಟಿ ಜನರ ಮಾಹಿತಿ ತಪ್ಪಾಗಿ ಬಹಿರಂಗೊಂಡಿದೆ ಎಂದು ಫೇಸ್ಬುಕ್ ಹೇಳಿಕೆ ನೀಡಿತು.

ಫೇಸ್ಬುಕ್ ಸಂಸ್ಥೆಯ ಆಂತರಿಕ ನಿರ್ವಹಣೆ ಹಾಗೂ ಗ್ರಾಹಕರ ಅನುಭವವನ್ನು ತಿಳಿದು, ಸುಧಾರಿತ ಸೇವೆ ನೀಡಲು ಗ್ರಾಹಕರ ಮಾಹಿತಿಗಳನ್ನು ಹಂಚಿಕೊಂಡಿರುವುದಾಗಿ ಫೇಸ್ಬುಕ್ ಹೇಳಿಕೊಂಡಿದೆ.

ಸಾಮಾಜಿಕ ಜಾಲತಾಣಗಳ ಬಳಕೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಎಲ್ಲ ಆಪರೇಟಿಂಗ್ ಸಿಸ್ಟಮ್ನಲ್ಲಿ ಫೇಸ್ಬುಕ್ ಬಳಕೆ ಮಾಡುವಂತೆ ಸುಧಾರಣೆ ತರುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಒಟ್ಟಾರೆ 52 ಸಂಸ್ಥೆಗಳೊಂದಿಗೆ ಮಾಡಿಕೊಂಡಿದ್ದ ಹೊಂದಾಣಿಕೆಗಳಲ್ಲಿ 38ನ್ನು ಕೈಬಿಡಲಾಗಿದೆ. ಜುಲೈನಲ್ಲಿ ಸಂಪೂರ್ಣ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಯಾಗಲಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...