alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಮೆಸ್ಸೆಂಜರ್ ಗೆ ಬರ್ತಿದೆ ಹೊಸ ಫೀಚರ್

ಫೇಸ್ಬುಕ್ ನಲ್ಲಿ ಖಾಸಗಿ ಮಾಹಿತಿ ಲೀಕ್ ಆಗ್ತಿದೆ ಎಂಬ ಕಾರಣಕ್ಕೆ ಅನೇಕರು ಫೇಸ್ಬುಕ್ ನಿಂದ ದೂರವಾಗ್ತಿದ್ದಾರೆ. ಈ ಮಧ್ಯೆ ಫೇಸ್ಬುಕ್ ಹೊಸ ಹೊಸ ಫೀಚರ್ ಗಳನ್ನು ಶುರುಮಾಡಿ ಬಳಕೆದಾರರನ್ನು ತನ್ನತ್ತ ಸೆಳೆಯುವ ಯತ್ನ ನಡೆಸುತ್ತಿದೆ. ಫೇಸ್ಬುಕ್ ನ ಇನ್ನೊಂದು ಫೀಚರ್ ಶೀಘ್ರವೇ ಶುರುವಾಗಲಿದೆ.

ಫೇಸ್ಬುಕ್ ಮೆಸ್ಸೆಂಜರ್ ನಲ್ಲಿ ಹೊಸ ಫೀಚರ್ ಪರೀಕ್ಷೆ ನಡೆಯುತ್ತಿದೆ. ಕಂಪನಿ ಅದಕ್ಕೆ ವಾಚ್ ವಿಡಿಯೋ ಟುಗೆದರ್ ಎಂದು ಹೆಸರಿಟ್ಟಿದೆ. ಸದ್ಯ ಪರೀಕ್ಷೆ ನಡೆಯುತ್ತಿದ್ದು, ಶೀಘ್ರವೇ ಮೆಸ್ಸೆಂಜರ್ ನಲ್ಲಿ ಈ ಫೀಚರ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ಈ ಫೀಚರ್ ಜಾರಿಗೆ ಬಂದ್ರೆ ಒಂದು ಗುಂಪಿನ ಎಲ್ಲ ಸದಸ್ಯರು ಬೇರೆ ಬೇರೆ ಡಿವೈಸ್ ನಲ್ಲಿ ಒಂದೇ ಬಾರಿ ಮೆಸ್ಸೆಂಜರ್ ನಲ್ಲಿರುವ ವಿಡಿಯೋವನ್ನು ನೋಡಬಹುದಾಗಿದೆ. ಸ್ನೇಹಿತರೊಂದಿಗೆ ವಿಡಿಯೋ ವೀಕ್ಷಣೆ ಜೊತೆಗೆ ಇದ್ರ ಬಗ್ಗೆ ಮಾತನಾಡಬಹುದಾಗಿದೆ. ವಿಡಿಯೋವನ್ನು ನಮ್ಮ ಜೊತೆ ಮತ್ತೆ ಯಾರ್ಯಾರು ವೀಕ್ಷಣೆ ಮಾಡ್ತಿದ್ದಾರೆಂಬ ಮಾಹಿತಿ ಕೂಡ ಇದ್ರಲ್ಲಿ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...