alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಜ್ಯುಕರ್ಬರ್ಗ್ ಗೆ ಮತ್ತೊಂದು ಸಂಕಟ

gty_mark_

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಜಾಸ್ತಿಯಾಗ್ತಾ ಇದೆ. ಇದ್ರಲ್ಲಿ ಫೇಸ್ಬುಕ್ ಕೂಡ ಒಂದು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ಜನರಿಗೇನೂ ಕಡಿಮೆ ಇಲ್ಲ. ಈ ನಡುವೆ ಹಳೆ ಸಂಬಂಧಗಳು ಹಾಳಾಗಿ, ಹೊಸ ಸಂಬಂಧಗಳು ಚಿಗುರಲೂ ಈ ಸಾಮಾಜಿಕ ಜಾಲತಾಣಗಳು ಕಾರಣವಾಗ್ತಾ ಇವೆ. ಇದು ಈಗ ಫೇಸ್ಬುಕ್ ಸಹ ಸಂಸ್ಥಾಪಕ ಮಾರ್ಕ್ ಜ್ಯುಕರ್ಬರ್ಗ್ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ತಮ್ಮ ಸಂಬಂಧಗಳು ಹಾಳಾಗಲು ಜ್ಯುಕರ್ಬರ್ಗ್ ಕಾರಣ ಅಂತಾ ಜನರು ಆರೋಪ ಮಾಡ್ತಿದ್ದಾರೆ. ಶೇಕಡಾ 20 ರಷ್ಟು ವಿಚ್ಛೇದನ ಫೇಸ್ಬುಕ್ ನಿಂದಾಗ್ತಿದೆಯಂತೆ. ಶೇಕಡಾ 33 ರಷ್ಟು ಮಂದಿ ಸಂಬಂಧ ಕೆಡಲು ಸಾಮಾಜಿಕ ಜಾಲತಾಣ ಕಾರಣ ಎಂದು ದೂರಿದ್ದಾರೆ. ಕೋರ್ಟ್ ನಲ್ಲಿ ಫೇಸ್ಬುಕನ್ನು ಸಾಕ್ಷಿಯಾಗಿ ಜನರು ಬಳಸ್ತಿದ್ದಾರಂತೆ.

ಇದರಿಂದಾಗಿ ಜ್ಯುಕರ್ಬರ್ಗ್ ಹಾಗೂ ಅವರ ಕುಟುಂಬಕ್ಕೆ ನಿರಂತರವಾಗಿ ಬೆದರಿಕೆಯ ಕರೆಗಳು ಬರ್ತಾ ಇವೆಯಂತೆ. ಹಾಗಾಗಿ ತಮ್ಮ ಹಾಗೂ ಕುಟುಂಬದ ರಕ್ಷಣೆಗೆ ಮುಂದಾಗಿದ್ದಾರೆ ಜ್ಯುಕರ್ಬರ್ಗ್. ಅವರು ತಮ್ಮ ಮನೆಯಲ್ಲಿ 16 ಅಂಗರಕ್ಷಕರನ್ನು ನಿಯೋಜಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...