alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಇಳಿಕೆಯಾಗುತ್ತಿದೆ ಫೇಸ್ಬುಕ್ ಬಳಕೆದಾರರ ಸಂಖ್ಯೆ

ಫೇಸ್‌ಬುಕ್‌ನಿಂದ ಜನರು ವಿಮುಖರಾಗುತ್ತಿದ್ದಾರಂತೆ…! ಹೌದು, ಇತ್ತೀಚೆಗೆ ಬಿಡುಗಡೆಯಾದ ವರದಿಯ ಪ್ರಕಾರ ಅಮೆರಿಕಾದಲ್ಲಿ ಶೇ.42 ರಷ್ಟು ಫೇಸ್‌ಬುಕ್‌ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ.

ಇತ್ತೀಚೆಗೆ ಫೇಸ್‌ಬುಕ್‌ ಬಳಕೆದಾರರ ಮಾಹಿತಿಗಳನ್ನು ಶೇರ್‌ ಮಾಡಿದ್ದ ಪ್ರಕರಣಗಳ ಬಳಿಕ, ಅಮೆರಿಕನ್ನರು, ಫೇಸ್‌ಬುಕ್‌ ಬಳಕೆಯಿಂದ ದೂರ ಸರಿಯುತ್ತಿದ್ದಾರೆ ಎಂದು ವರದಿ ಹೇಳಿದೆ. ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯು, ರಾಜಕೀಯ ಸಮೀಕ್ಷೆಗಾಗಿ ಫೇಸ್‌ಬುಕ್‌ನಿಂದ ಬಳಕೆದಾರರ ಮಾಹಿತಿಗಳನ್ನು ಪಡೆದುಕೊಂಡಿದೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು.

ಕಳೆದ 1 ವರ್ಷದಲ್ಲಿ ಶೇ.26 ರಷ್ಟು ಜನ ಫೇಸ್‌ಬುಕ್‌ ಅಪ್ಲಿಕೇಶನ್‌ ಡಿಲಿಟ್‌ ಮಾಡಿದ್ದಾರೆ. 18-29 ವರ್ಷದೊಳಗಿನವರಲ್ಲಿ ಶೇ. 44 ರಷ್ಟು ಜನ ಫೇಸ್‌ಬುಕ್‌ ಅಪ್ಲಿಕೇಶನ್‌ ಡಿಲಿಟ್‌ ಮಾಡಿದ್ದಾರೆ ಎಂದು ವರದಿ ಹೇಳಿದೆ. ಬಳಕೆದಾರರ ಪೈಕಿ 4 ನೇ 3ರಷ್ಟು ಮಂದಿ ತಮ್ಮ ಪ್ರೈವೆಸಿ ಸೆಟ್ಟಿಂಗ್ಸ್‌ಗಳನ್ನು ಬದಲಾವಣೆ ಮಾಡಿದ್ದಾರೆ.

ಅಮೆರಿಕಾದಲ್ಲಿನ ಯುವ ಜನಾಂಗ ಈಗಾಗಲೇ ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಂಗೆ ವರ್ಗಾವಣೆಯಾಗುತ್ತಿದ್ದು, ಎಫ್‌ಬಿಯಲ್ಲಿ ಪೋಸ್ಟ್‌ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇಷ್ಟಾಗಿಯೂ ಫೇಸ್‌ಬುಕ್‌ ಜಗತ್ತಿನ ಅತಿ ಹೆಚ್ಚು ಬಳಕೆಯಾಗುವ ಸಾಮಾಜಿಕ ತಾಣವಾಗಿದ್ದು, 2 ಬಿಲಿಯನ್‌ಗೂ ಅಧಿಕ ಬಳಕೆದಾರರಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...