alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರ್ಡ್ ವೇರ್ ಕ್ಷೇತ್ರಕ್ಕೂ ಕಾಲಿಟ್ಟ ಫೇಸ್ಬುಕ್: ಮಾರುಕಟ್ಟೆಗೆ ಬರ್ತಿದೆ ಎರಡು ಉತ್ಪನ್ನ

ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ಬುಕ್ ಹಾರ್ಡ್ ವೇರ್ ಮಾರುಕಟ್ಟೆಗೆ ಹೊರ ರೀತಿಯಲ್ಲಿ ಎಂಟ್ರಿ ಪಡೆದಿದೆ. ಫೇಸ್ಬುಕ್ ತನ್ನ ಬ್ರ್ಯಾಂಡ್ ಹಾರ್ಡ್ ವೇರ್ ಉತ್ಪನ್ನವನ್ನು ಮಾರುಕಟ್ಟೆಗೆ ಬಿಟ್ಟಿದೆ. ಕಂಪನಿ ಫೇಸ್ಬುಕ್ ಪೋರ್ಟಲ್ ಹೆಸರಿನ ಸ್ಮಾರ್ಟ್ ಡಿಸ್ಪ್ಲೇ ಹಾಗೂ ಸ್ಮಾರ್ಟ್ ಸ್ಪೀಕರನ್ನು ಬಿಡುಗಡೆ ಮಾಡಿದೆ.

ಲೇಸರ್ ಫೋಕಸ್ ವಿಡಿಯೋ ಚಾಟ್ ಗಮನದಲ್ಲಿಟ್ಟುಕೊಂಡು ಕಂಪನಿ ಈ ಉತ್ಪನ್ನವನ್ನು ತಯಾರಿಸಿದೆ. ಫೇಸ್ಬುಕ್ ಪೋರ್ಟಲ್ ಸ್ಮಾರ್ಟ್ ಡಿಸ್ಪ್ಲೇಯಲ್ಲಿ ಸಂಗೀತ ಕೇಳಬಹುದಾಗಿದೆ. ಫೇಸ್ಬುಕ್ ವಿಡಿಯೋಗಳನ್ನು ನೋಡಬಹುದಾಗಿದೆ. ಇದ್ರ ಜೊತೆ ಫೇಸ್ಬುಕ್ ಬ್ರೌಸ್ ಕೂಡ ಮಾಡಬಹುದಾಗಿದೆ.

ಫೇಸ್ಬುಕ್ ಅಕೌಂಟ್ ಹ್ಯಾಕರ್ ಪಾಲಾಗುತ್ತಿರುವುದನ್ನು ಗಮನಿಸಿರುವ ಕಂಪನಿ ಸ್ಪೀಕರ್ ತಯಾರಿ ವೇಳೆ ಹೆಚ್ಚಿನ ಭದ್ರತೆ ವಹಿಸಿದೆ. ಫೇಸ್ಬುಕ್ ಪೋರ್ಟಲ್ ಹಾಗೂ ಪೋರ್ಟಲ್ ಪ್ಲಸ್ ಎರಡೂ ಉತ್ಪನ್ನಗಳ ಮುಂಗಡ ಬುಕ್ಕಿಂಗ್ ಅಮೆರಿಕಾದಲ್ಲಿ ಶುರುವಾಗಿದೆ. ಪೋರ್ಟಲ್ ಬೆಲೆ 199 ಡಾಲರ್ ( ಸುಮಾರು 14739 ರೂ.) ಪೋರ್ಟಲ್ ಪ್ಲಸ್ ಬೆಲೆ 349 ಡಾಲರ್ ( ಸುಮಾರು 25,849 ರೂ.)

ಪೋರ್ಟಲ್ ಇಲ್ಲದ ಗ್ರಾಹಕರನ್ನೂ ನೀವು ಡಿವೈಸ್ ಗೆ ಕನೆಕ್ಟ್ ಮಾಡಿ ವಿಡಿಯೋ ಕಾಲಿಂಗ್ ಮಾಡಬಹುದು. ಒಂದೇ ಬಾರಿ ಈ ಡಿವೈಸ್ ಮೂಲಕ 7 ಮಂದಿ ವಿಡಿಯೋ ಕಾಲಿಂಗ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...