alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ನಿಂದಾಯ್ತು ಸಾರ್ಥಕ ಕಾರ್ಯ

facebook.jpg.image.975.568

ಸಾಮಾಜಿಕ ಜಾಲ ತಾಣಗಳನ್ನು ಇತ್ತೀಚೆಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವವರೇ ಜಾಸ್ತಿ. ಸಾಮಾಜಿಕ ಜಾಲ ತಾಣಗಳಿಂದ ವಂಚನೆಗೊಳಗಾದವರ ಕುರಿತು ದಿನನಿತ್ಯ ಸುದ್ದಿಯಾಗುತ್ತಲೇ ಇದೆ. ಈ ಮಧ್ಯೆ ಅಪರೂಪದ ಪ್ರಕರಣವೊಂದು ನಡೆದಿದೆ.

29 ವರ್ಷಗಳ ಹಿಂದೆ ಬೇರೆಯಾಗಿದ್ದ ಅಕ್ಕ- ತಮ್ಮನನ್ನು ಫೇಸ್ ಬುಕ್ ಒಂದುಗೂಡಿಸಿದೆ. ಕೆನಡಾದ ತಾಯಿಯೊಬ್ಬಳು 1987 ರಲ್ಲಿ ತಾನು ಹೆತ್ತ ಮಗುವನ್ನು ದತ್ತು ನೀಡಿದ್ದಳು. ಬಳಿಕ ಈ ಕುಟುಂಬಕ್ಕೆ ಆ ಮಗುವಿನ ಕುರಿತು ಯಾವುದೇ ಮಾಹಿತಿ ಇರಲಿಲ್ಲ.

ಆದರೆ ಮಹಿಳೆಯ ಪುತ್ರಿ ಶೈಲೋ ವಿಲ್ಸನ್ ಮಾತ್ರ ತನ್ನ ಸಹೋದರನ ಪತ್ತೆಗಾಗಿ ಪ್ರಯತ್ನ ನಡೆಸುತ್ತಲೇ ಇದ್ದರು. ಹೊಸ ವರ್ಷದಂದು ತಮ್ಮ ಸಹೋದರನಿಗಿಟ್ಟಿದ್ದ ಮ್ಯಾಥ್ಯೂ ಎಂಬ ಹೆಸರನ್ನು ಹೆಸರಿಸಿ ಫೇಸ್ ಬುಕ್ ನಲ್ಲಿ ತಮ್ಮ ತಾಯಿ ದತ್ತು ನೀಡಿದ ವಿವರವನ್ನು ಪೋಸ್ಟ್ ಮಾಡಿದ್ದರು.

ಈ ಪೋಸ್ಟ್ ಅನ್ನು ಆನೇಕರು ಶೇರ್ ಮಾಡಿದ್ದ ಕಾರಣ ಅತ್ತ ತನ್ನ ತಾಯಿ ಹಾಗೂ ಸಹೋದರಿಯನ್ನು ಹುಡುಕುತ್ತಿದ್ದ ಮ್ಯಾಥ್ಯೂ ಹ್ಯಾಂಡ್ ಫೋರ್ಡ್ ಗೂ ತಲುಪಿದೆ. ತಕ್ಷಣವೇ ಆತ ಕೆನಡಾದಲ್ಲಿದ್ದ ತನ್ನ ಸಹೋದರಿಯನ್ನು ಫೋನ್ ಮೂಲಕ ಸಂಪರ್ಕಿಸಿದ್ದಲ್ಲದೇ ಬಳಿಕ ಭೇಟಿಯನ್ನೂ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...